ಕಥುವಾದಲ್ಲಿ ದಾಳಿಗೂ ಮುನ್ನ ಗ್ರಾಮಸ್ಥರಿಗೆ ಗನ್‌ ತೋರಿಸಿ ಅಡುಗೆ ಮಾಡಿಸಿಕೊಂಡಿದ್ದ ಉಗ್ರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರು ಹೊಂಚು ದಾಳಿ ನಡೆಸುವುದಕ್ಕೂ ಮುನ್ನ ಜನರ ಹಣೆಗೆ ಬಂದೂಕಿಟ್ಟು ಅಡುಗೆ ಮಾಡಿಸಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಮಚೇಡಿ ಪ್ರದೇಶದಲ್ಲಿ ಉಗ್ರರು ಸೇನಾ ವಾಹನಗಳ ಮೇಲೆ ದಾಳಿ ನಡೆಸಿದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದರು. ಆರು ಮಂದಿ ಗಾಯಗೊಂಡಿದ್ದರು. ಕಥುವಾ ಪಟ್ಟಣದಿಂದ 150 ಕಿ.ಮೀ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದ ಬಳಿಯ ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ಮಧ್ಯಾಹ್ನ 3.30 ರ ಸುಮಾರಿಗೆ ಉಗ್ರರು ಹೊಂಚು ಹಾಕಿ, ಸೇನಾ ವಾಹನದ ಮೇಲೆ ಗ್ರೇನೆಡ್ ಹಾಗೂ ಗುಂಡಿನ ದಾಳಿ ನಡೆಸಿದ್ದರು.

ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕರು ಬಾಡಿಕ್ಯಾಮ್‌ಗಳನ್ನು ಧರಿಸಿದ್ದರು ಮತ್ತು ಹೆಚ್ಚಿನ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ ಸೇನಾ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಬಯಸಿದ್ದರು ಮತ್ತು ಯೋಧರು ಗಾಯಗೊಂಡಿದ್ದರೂ ಸಹ ಅವರ ಯೋಜನೆಯನ್ನು ವಿಫಲಗೊಳಿಸಿದರು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!