Saturday, August 13, 2022

Latest Posts

ವೈರಮುಡಿ ಮಹೋತ್ಸವಕ್ಕೆ ಪೂರ್ವಸಿದ್ಥತೆ-ಚೆಲುವನಾರಾಯಣಸ್ವಾಮಿಗೆ ಸಹಸ್ರ ಕಳಶಾಭಿಷೇಕ

ಹೊಸ ದಿಗಂತ ವರದಿ, ಮೇಲುಕೋಟೆ:

ಮಾರ್ಚ 24 ರಂದು ನಡೆಯುವ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಪೂರ್ವಸಿದ್ಧತಾ ಕಾರ್ಯಕ್ರಮವಾಗಿ ಶುಕ್ರವಾರ
ಹಮ್ಮಿಕೊಂಡ ಸಹಸ್ರಕಳಶಾಭಿಷೇಕ ಸಾಂಗವಾಗಿ ನೆರವೇರಿತು.
ಕಳೆದ ಸಲ ವೈರಮುಡಿ ಬ್ರಹ್ಮೋತ್ಸವ ರದ್ದುಮಾಡಿದ ಕಾರಣ ಈ ಸಲದ ಜಾತ್ರಾಮಹೋತ್ಸವಕ್ಕೂ ಮುನ್ನ ಪ್ರಾಯಶ್ಚಿತ್ತಪೂರ್ವಕವಾಗಿ ಅಮ್ಮನವರ ಸನ್ನಿಧಿಯ ಮುಂಭಾಗ 25 ಆರಾಧನೆಯೊಂದಿಗೆ 600 ದ್ರವ್ಯಗಳಿಂದ ರಾಮಾನುಜರು ಆಳ್ವಾರರು ಮತ್ತು ಶ್ರೀದೇ”-ಭೂದೇ” ಸಮೇತ “ರಾಜಮಾನನಾದ ಉತ್ಸವಮೂರ್ತಿ ಚೆಲುವನಾರಾಯಣಸ್ವಾ”ುಗೆ ಸಹಸ್ರಕಳಶಾಭಿಷೇಕ ನೆರವೇರಿಸಲಾುತು. ವೇದಘೋಷದೊಂದಿಗೆ ನೆರವೇರಿದ ಸಹಸ್ರಕಳಶಾಭಿಷೇಕದಲ್ಲಿ ಯದುಗಿರಿ ಯತಿರಾಜ ಶ್ರೀಮನ್ನಾರಾಯಣ ಜೀಯರ್, ಮೈಸೂರು ರಾಜಗುರು ಪರಕಾಲಶ್ರೀ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭಾಗಿಯಾದರು.
ದೇವಾಲಯದ ಆಡಳಿತಾಧಿಕಾರಿಗಳೂ ಆದ ಪಾಂಡವಪುರ ಉಪ”ಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸಮಕ್ಷಮದಲ್ಲಿ ಬೆಳಿಗ್ಗೆ 8 ಗಂಟೆಗೆ ಕಳಶಾರಾಧನೆಯೊಂದಿಗೆ ಆರಂಭವಾದ ಮಹಾಭಿಷೇಕ ಸಂಜೆಯವರೆಗೂ ನೆರವೇರಿತು. ಚೆಲುವನಾರಾಯಣನಿಗೆ 25 ಬಗೆಯ ಪುಷ್ಪಗಳು, ಡ್ರೈಪ್ರೋಟ್ಸ್, “”ಧ ಬಗೆಯ ಅಲಂಕಾರಿಕ ಕಿರೀಟವನ್ನು ತೊಡಿಸಿ ಕಳಸಗಳಿಂದ ಅಭಿಷೇಕ ನೆರವೇರಿಸಲಾುತು. ಚೆಲುವನ ಅಭಿಷೇಕದ ವೈಭವವನ್ನು ಭಕ್ತರು ಕಣ್ತುಂಬಿಕೊಂಡರು. ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾ”ುಗೆ ಕುಂಬದ ತೀರ್ಥಪ್ರೋಕ್ಷಣೆ ಮಾಡಿ ಅಭಿಷೇಕದ “ದಿ”ಧಾನಗಳನ್ನು ನೆರವೇರಿಸಲಾುತು.
ಉತ್ಸವಮೂರ್ತಿ ಚೆಲುವನಾರಾಯಣಸ್ವಾ”ುಗೆ ಸಹಸ್ರಕಳಶಾಭಿಷೇಕದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಸಹ ಮೂಲಮೂರ್ತಿಯ ದರ್ಶನಕ್ಕೆ ಭಕ್ತರು ಮತ್ತು ಗಣ್ಯರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಹಸ್ರಕಳಶಾಭಿಷೇಕದಲ್ಲಿ ನೀರಿಕ್ಷಿತ ಪ್ರಮಾಣದಲ್ಲಿ ಭಕ್ತರ ದಟ್ಟಣೆ ಕಂಡುಬರಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss