Monday, July 4, 2022

Latest Posts

ಕೋಟಿಗೊಬ್ಬ-3 ಮಾರ್ನಿಂಗ್ ಶೋ ಕ್ಯಾನ್ಸಲ್: ಅಭಿಮಾನಿಗಳಿಗೆ ಬೇಸರ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಿಚ್ಚ ಸುದೀಪ ಅಭಿನಯದ ಕೋಟಿಗೊಬ್ಬ-3 ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಮಾರ್ನಿಂಗ್ ಶೋ ರದ್ದಾಗಿದೆ.
ಮುಂಜಾನೆ ಏಳು ಗಂಟೆಗೆ ಫ್ಯಾನ್ಸ್ ಥಿಯೇಟರ್‌ಗಳ ಮುಂದೆ ಸಾಲಿನಲ್ಲಿ ನಿಂತಿದ್ದು, ಶೋ ಕ್ಯಾನ್ಸಲ್ ಆಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 7 ಗಂಟೆಗೆ ಮೊದಲ ಶೋ ಆರಂಭವಾಗಬೇಕಿತ್ತು. ಥಿಯೇಟರ್‌ಗಳ ಮುಂದೆ ಆರು ಗಂಟೆಗೆ ಹಾಜರಾಗಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ಮಾಗಡಿ ರಸ್ತೆಯ ಪ್ರಸನ್ನ, ಅವಳಹಳ್ಳಿಯ ವೆಂಕಟೇಶ್ವರ ಥಿಯೇಟರ್‌ನಲ್ಲಿ ತಾಂತ್ರಿಕ ದೋಷದಿಂದ ಏಳು ಗಂಟೆ ಶೋ ಪ್ರದರ್ಶನವಾಗಿಲ್ಲ. 10  ಗಂಟೆ ಶೋವರೆಗೂ ಕಾಯಬೇಕೆಂದು ಅಥವಾ ರೀಫಂಡ್ ಮಾಡುವುದಾಗಿ ಚಿತ್ರಮಂದಿರ ಆಡಳಿತ ಮಂಡಳಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss