ಮಿನಿ ಪಿಜ್ಜಾ ರೆಸಿಪಿ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು
2 ಕಪ್ ಮೈದಾ
1/4 ಟೀಸ್ಪೂನ್ ಅಡಿಗೆ ಸೋಡಾ
1 ಟೀಸ್ಪೂನ್ ಬೇಕಿಂಗ್ ಪೌಡರ್
1/4ಟೀಸ್ಪೂನ್ ಉಪ್ಪು
1/4 ಕಪ್ ಮೊಸರು
1/4 ಕಪ್ ಹಾಲು
2 ಟೇಬಲ್ಸ್ಪೂನ್ ಆಲಿವ್ ಎಣ್ಣೆ
ಪಿಜ್ಜಾ ಸಾಸ್‌
ಕತ್ತರಿಸಿದ ಕ್ಯಾಪ್ಸಿಕಂ, ಈರುಳ್ಳಿ, ಟೊಮೆಟೊ
ಸಿಹಿ ಕಾರ್ನ್
ಜಲಪೆನೊ
ಆಲೀವ್ಸ್‌
ಚೀಸ್‌

ಮಾಡುವ ವಿಧಾನ: 

ಒಂದು ದೊಡ್ಡ ಬಟ್ಟಲಿನಲ್ಲಿ 2 ಕಪ್ ಮೈದಾ, ಅಡಿಗೆ ಸೋಡಾ, ಬೇಕಿಂಗ್ ಪೌಡರ್,  ಉಪ್ಪು ತೆಗೆದುಕೊಳ್ಳಿ ಹಾಕಿ ಮಿಕ್ಸ್‌ ಮಾಡಿ. ನಂತರ ಅದಕ್ಕೆ  ಮೊಸರು ಮತ್ತು ಹಾಲು ಸೇರಿಸಿ ಹಿಟ್ಟನ್ನು ಬೆರೆಸಿಕೊಳ್ಳಿ. ಅಗತ್ಯವಿರುವಂತೆ ಹಾಲು ಸೇರಿಸಿ ಮತ್ತು ಮೃದುವಾದ ಹಿಟ್ಟನ್ನು ನಾದಿಕೊಳ್ಳಿ. ಈಗ 2 ಟೇಬಲ್ಸ್ಪೂನ್ ಆಲಿವ್ ಎಣ್ಣೆಯನ್ನು ಸೇರಿಸಿ ಹಿಟ್ಟು ಮೃದುವಾಗುವವರೆಗೆ ನಾದಿ ಒಂದು ಗಂಟೆ ಪಕ್ಕಕ್ಕಿಡಿ. ಬಳಿಕ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಒತ್ತಿ ನಿಂಬೆ ಹಣ್ಣಿನ ಗಾತ್ರದ ಉಂಡೆಯನ್ನಾಗಿ ಮಾಡಿ ದಪ್ಪವಾಗಿ ಲಟ್ಟಿಸಿ ಫೋರ್ಕ್‌ನಿಂದ ಚುಚ್ಚಿ ತವಾ ಮೇಲೆ ಎರಡೂ ಬದಿ ಬೇಯಿಸಿ.

ಬಳಿಕ ಅದಕ್ಕೆ ಪಿಜ್ಜಾ ಸಾಸ್‌ ಹಾಕಿ ಕತ್ತರಿಸಿಟ್ಟ ಎಲ್ಲಾ ತರಕಾರಿ ಹಾಗೂ ತುರಿದ ಚೀಸ್‌ ಹಾಕಿ ಕಡಿಮೆ ಉರಿಯಲ್ಲಿ ಮುಚ್ಚಳ ಮುಚ್ಚಿ ಚೀಸ್‌ ಕರಗುವವರೆಗೆ ಬೇಯಿಸಿದರೆ ಮಿನಿ ಪಿಜ್ಜಾ ಸವಿಯಲು ಸಿದ್ದ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!