Saturday, July 2, 2022

Latest Posts

ರೈತನೊಂದಿಗೆ ವಾಗ್ವಾದ- ಸಚಿವ ಭಗವಂತ ಖುಬಾ ಸ್ಪಷ್ಟನೆ

 

ಹೊಸ ದಿಗಂತ ವರದಿ

ರೈತರ ಜೊತೆ ತಾವು ಸರಿಯಾಗಿ ಮಾತನಾಡಲಿಲ್ಲ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿ ಸತ್ಯಕ್ಕೆ ದೂರವಾಗಿದ್ದು ಕೆಲವರು  ರಾಜಕೀಯ ಪ್ರೇರಿತರಾಗಿ ಎಡಿಟ್ ಮಾಡಿರುವ ಸಂಭಾಷಣೆಯನ್ನು ಮಾದ್ಯಮಗಳಿಗೆ ಮತ್ತು ಸಾಮಾಜಿಕ ಜಾಲ ತಾಣಗಳಿಗೆ ಹರಿಬಿಟ್ಟಿದ್ದಾರೆ ಎಂದು  ಕೇಂದ್ರ  ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನೂತನ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖುಬಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಸಗೊಬ್ಬರದ ಕುರಿತಂತೆ ತಾವು ರೈತರೊಂದಿಗೆ ಸರಿಯಾಗಿ ಮಾತನಾಡಲಿಲ್ಲ ಎಂದು ಸುದ್ದಿ ಬಿತ್ತರಗೊಳ್ಳುತ್ತಿದ್ದು ತಮ್ಮೊಂದಿಗೆ ಮಾತನಾಡಿರುವ ವ್ಯಕ್ತಿ ಯಾವುದೇ ರೈತನಾಗಿರದೇ ಒಬ್ಬ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದ ಆ ವ್ಯಕ್ತಿ ಜೂನ್ 10 ರಂದು ರಾತ್ರಿ 10.52 ರಿಂದ 11.32 ರ ಅವಧಿಯಲ್ಲಿ ಮೂರು ನಾಲ್ಕು ಬಾರಿ ಕರೆ ಮಾಡಿದ್ದು ಏನಾದರೂ ತುರ್ತು ಕೆಲಸ ಇರಬಹುದು ಎಂದು ತಾವೇ ಖುದ್ದಾಗಿ ಆ ವ್ಯಕ್ತಿಗೆ ಕರೆ ಮಾಡಿ ಮಾತನಾಡಿದ್ದು ರಸಗೊಬ್ಬರದ ಕುರಿತಂತೆ ಮಾತನಾಡಿದ ಆತ ಆಕ್ಷೇಪಾರ್ಹ ಶಬ್ದಗಳನ್ನು ಬಳಕೆ ಮಾಡಿರುವುದರಿಂದ ಅವಶ್ಯಕ ವಿಷಯಗಳಿಗೆ ಮಾತ್ರ ಉತ್ತರ ನೀಡಿರುವುದಾಗಿ ಸಚಿವ ಖುಬಾ ತಿಳಿಸಿದ್ದಾರೆ.

ತಾವು ಮಾಡಿರುವ ಸಂಭಾಷಣೆಯಲ್ಲಿ ಅವರಿಗೆ ಅವಶ್ಯ ಇರುವುದನ್ನು ಮಾತ್ರ ಎಡಿಟ್ ಮಾಡಿ ಮಾದ್ಯಮಗಳಿಗೆ ನೀಡಲಾಗಿದೆ, ಕೇಂದ್ರ ಸರ್ಕಾರ ಮತ್ತು ತಾವು ಸದಾ ಕಾಲ ರೈತರ ಪರವಾಗಿ ಕೆಲಸ ಮಾಡುತ್ತಿದ್ದು

ಕೆಲವರು ಸರ್ಕಾರಕ್ಕೆ ಮತ್ತು ತಮ್ಮ ಹೆಸರಿಗೆ ಕಪ್ಪು ಚುಕ್ಕೆ ತರುವ ದೃಷ್ಟಿಯಿಂದ ಇಂತಹ ಕೃತ್ಯ ಎಸಗಿದ್ದು ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಸರ್ಕಾರ ಸದಾ ಕಾಲ ರೈತರ ಪರವಾಗಿ ಕೆಲಸ ಮಾಡುತ್ತಾ ಇರುತ್ತದೆ ಎಂದು ಸಚಿವ ಭಗವಂತ ಖುಬಾ ಪ್ರಕಟನೆಯ ಮೂಲಕ  ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss