Thursday, August 18, 2022

Latest Posts

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ಕೋಟ

ಹೊಸ ದಿಗಂತ ವರದಿ, ಮೈಸೂರು:

ಮೈಸೂರಿನ ವಸಂತ ನಗರದಲ್ಲಿ ನಿರ್ಮಾಣವಾಗುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ
ನೂತನ ಕಟ್ಟಡವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 16 ವಸತಿ ನಿಲಯಗಳು ಇದ್ದು ಸರಸ್ವತಿಪುರಂ, ಬೋಗಾದಿ, ಶ್ರೀರಾಂಪುರ, ಗೋಕುಲಂ, ಕುವೆಂಪು ನಗರದ ಭಾಗಗಳಲ್ಲಿ, ಖಾಸಗಿ ಹಾಸ್ಟೆಲ್ ಗಳಲ್ಲಿ ನಡೆಯುತ್ತಿದ್ದು, ಈ ಹಾಸ್ಟೆಲ್ ಗಳಿಗೆ ಸುಮಾರು 19 ಲಕ್ಷ ರೂ ಗಳ ಬಾಡಿಗೆ ಸಂದಾಯವಾದರೆ, ಸುಮಾರು ವರ್ಷಕ್ಕೆ 2.5ಕೋಟಿ ರೂಗಳು ಬೊಕ್ಕಸಕ್ಕೆ ನಷ್ಟ ವಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ಮೈಸೂರಿನ ನ ಹೊರವಲಯ ವಸಂತ ನಗರದಲ್ಲಿ 4 ಕಟ್ಟಡ ಗಳು ನಿರ್ಮಾಣ ವಾಗುತ್ತಿದ್ದು, ಇದರು ಕಾರ್ಯಾರಂಭ ಮಾಡಿದರೆ ತಿಂಗಳಿಗೆ 5 ಲಕ್ಷದಂತೆ ವರ್ಷಕ್ಕೆ 60 ಲಕ್ಷ ಇಲಾಖೆಗೆ ಉಳಿತಾಯ ವಾಗುತ್ತದೆ,
ಹಾಗೇಯೆ ಒಂದು ಕಟ್ಟಡದಲ್ಲಿ ಸುಮಾರು 120 ಮಕ್ಕಳು ವಸತಿಯನ್ನು ಪಡೆದರೆ, 500 ಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಮಾಡಬಹುದು ಎಂದು ತಿಳಿಸಿದರು.
ಕಟ್ಟಡವನ್ನು ನಿರ್ಮಾಣವನ್ನು ಕರ್ನಾಟಕ ಗೃಹ ಮಂಡಳಿ ಯವರು ಕೆಲಸ ಮಾಡುತ್ತಿದ್ದು, ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಬಡ ಹಿಂದುಳಿದ ವರ್ಗಗಳ ಯುವಕರುಗಳಿಗೆ ಅನುಕೂಲ ಮಾಡಲು, ಕಾಮಗಾರಿಯನ್ನು ಮುಂದಿನ ಜೂನ್ ತಿಂಗಳಲ್ಲಿ ಮುಕ್ತಾಯ ಮಾಡಿ, ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಂದ್ಯಾ,ಕೆ.ಎಚ್.ಬಿ.ಯ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್, ತಾಲ್ಲೂಕು ಕಲ್ಯಾಣ ಅಧಿಕಾರಿ ಚಂದ್ರಕಲಾ, ವಿಸ್ತರಣಾಧಿಕಾರಿ ಸತೀಶ್,ಇಂಜಿನಿಯರ್ ಕೃಷ್ಣಾ, ಹಿಂದುಳಿದ ವರ್ಷಗಳ ಮೋರ್ಚಾ ಅಧ್ಯಕ್ಷ ಜೋಗಿಮಂಜು, ಗ್ರಾಮಾಂತರ ಅಧ್ಯಕ್ಷ ಪರಶುರಾಮಪ್ಪ ಮತ್ತಿತರರು ಇದ್ದರು..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!