Sunday, March 7, 2021

Latest Posts

ಬಾಗಲಕೋಟೆ| ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಚರಂತಿಮಠ ಚಾಲನೆ

ಹೊಸ ದಿಗಂತ ವರದಿ, ಬಾಗಲಕೋಟೆ:

ನಗರಸಭೆಯ ವಿವಿಧ ವಾರ್ಡಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಒಟ್ಟು 7 ಕೋಟಿ ರೂ.ಗಳ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಮಂಗಳವಾರ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನವನಗರದ ಸೆಕ್ಟರ್ ನಂ.10ರಲ್ಲಿ 73 ಲಕ್ಷ ರೂ.ಗಳ ಕಾಮಗಾರಿ, ನವನಗರದ ವಾಂಬೆ ಕಾಲೋನಿಯಲ್ಲಿ 77.7 ಲಕ್ಷ ರೂ., ವಿದ್ಯಾಗಿರಿಯ 19, 20ನೇ ಮುಖ್ಯ ರಸ್ತೆ ವಾರ್ಡ ನಂ.33ರಲ್ಲಿ 36 ಲಕ್ಷ ರೂ., ವಿದ್ಯಾಗಿರಿಯ ಜ್ಯೋತಿ ಕಾಲನಿಯ ವಾರ್ಡ ನಂ.19 ರಲ್ಲಿ 25 ಲಕ್ಷ ರೂ., ಕೆರೂಡಿಯವರ ಮನೆಯ ಹತ್ತಿರ ವಿನಾಯಕ ನಗರದ ವಾರ್ಡ ನಂ.3 ರಲ್ಲಿ 74.48 ಲಕ್ಷ ರೂ., ಶುದ್ದ ಕುಡಿಯುವ ನೀರಿನ ಶೆಡ್ ನಿರ್ಮಾಣ, ಪ್ಹೇವರ ರಸ್ತೆ ನಿರ್ಮಾಣ, ಉದ್ಯಾನವನ ಅಭಿವೃದ್ದಿ ಸೇರಿದಂತೆ ಇತರೆ ಅಭಿವೃಧ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಳಪೇಟೆ ಹನಮಪ್ಪನ ಗುಡಿಯ ಹತ್ತಿರ ವಾರ್ಡ ನಂ.7ರಲ್ಲಿ 51.25 ಲಕ್ಷ ರೂ., ಲಕ್ಷ್ಮೀಗುಡಿ ಹತ್ತಿರ ಹಳೇ ಡೆಂಟಲ್ ಕಾಲೇಜ ವಾರ್ಡ ನಂ.9ರಲ್ಲಿ 44.4 ಲಕ್ಷ ರೂ.ಗಳ ಕಾಮಗಾರಿ, ಕೋತ್ತಲೇಶ್ವರ ಗುಡಿ ಹಿಂದುಗಡೆ ವಾರ್ಡ ನಂ.14 ರಲ್ಲಿ 96.1 ಲಕ್ಷ ರೂ.ಗಳ ಕಾಮಗಾರಿ, ವೀರಭದ್ರೇಶ್ವರ ಗುಡಿ ಮುಚಖಂಡಿ ಕ್ರಾಸ್ ಹತ್ತಿರ 45 ಲಕ್ಷ ರೂ.ಗಳ ವೆಚ್ಚದಲ್ಲಿ ಚರಂಡಿ ನಿರ್ಮಾಣ, ಪೈಪಲೈನ್ ಅಳವಡಿಕೆ, ಬೀದಿ ದೀಪ ಅಳವಡಿಕೆ, ಸಿಸಿ ರಸ್ತೆ ಸೇರಿದಂತೆ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದರು.

ಪ್ರತಿಯೊಂದು ಕಾಮಗಾರಿ ಗುಣಮುಟ್ಟದಿಂದ ಕೂಡಿರುವದರ ಜೊತೆಗೆ ನಿಗದಿತ ಅವಧಿಯಲ್ಲಿ ಪ್ರತಿಯೊಂದು ಕಾಮಗಾರಿಗಳು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯರಾದ ಶೋಭಾ ವೆಂಕಟೇಶರಾವ್, ಅನೀಲ ಅಕ್ಕಮರಡಿ, ಮುತ್ತಪ್ಪ ಸೂಳಿಕೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಗುತ್ತಿಗೆದಾರರಾದ ರವಿ ಆಲೂರ, ಸಾಗರ್ ವೈದ್ಯ, ಎಸ್.ಎಚ್.ಕಟಾರೆ, ಬಸವರಾಜ ಹೊನ್ನಳ್ಳಿ, ವೆಂಕಟೇಶ ಹಂದ್ರಾಳ, ಮಂಜು ಸಿಂದಗಿ, ಹನಮಂತ ತೆಗ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss