ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಾಮರಾಜನಗರ 24 ಜನರ ಸಾವಿನ ಪ್ರಕರಣ: ತನಿಖೆಗೆ ಸೂಚಿಸಿದೆ ಎಂದ ಸಚಿವ ನಿರಾಣಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………

ಹೊಸದಿಗಂತ ವರದಿ, ವಿಜಯಪುರ:

ಚಾಮರಾಜ ನಗರದಲ್ಲಿ 24 ಜನರು ಸಾವಿಗೀಡಾಗಿರುವ ಪ್ರಕರಣದ ಕುರಿತು ತನಿಖೆ ಮಾಡಲಾಗುತ್ತಿದ್ದು, ಮೂರು ದಿನದಲ್ಲಿ ತನಿಖಾ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮರಾಜ ನಗರ ಪ್ರಕರಣದ ತನಿಖೆಗಾಗಿ ಶಿವಯೋಗಿ ಕಳಸದ ಅವರನ್ನು ನೋಡಲ್ ಅಧಿಕಾರಿಯಾಗಿ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸೂಚಿಸಲಾಗಿದ್ದು, ಆಕ್ಸಿಜನ್ ನಿಂದ ಅಥವಾ ಬೇರೆ ಕಾರಣದಿಂದ ಮೃತಪಟ್ಟಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ. ಇದು ಅತ್ಯಂತ ದುರದೃಷ್ಟಕರವಾಗಿದ್ದು, ಮುಂದೆ ಹೀಗೆ ಆಗದ ಹಾಗೆ ಸರ್ಕಾರ ಎಚ್ಚರಿಕೆ ವಹಿಸುತ್ತದೆ ಎಂದರು.
ಸದ್ಯ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರಬಹುದು. ಈಗ ಕೈಗಾರಿಕೆಗಳಿಗೆ ಉಪಯೋಗ ಮಾಡುವಂತಹ ಆಕ್ಸಿಜನ್ ಸಹಿತ ಬಳಸಿಕೊಳ್ಳಲಾಗುತ್ತಿದೆ. ನಮ್ಮ ಸುಗರ್ ಪ್ಯಾಕ್ಟರಿ ಅಲ್ಲಿ ಸಹಿತ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಬೇಕಾಗುವಷ್ಟು ದೊಡ್ಡ ಮಟ್ಟದಲ್ಲಿ ಆಕ್ಸಿಜನ್ ಉತ್ಪತ್ತಿ ಮಾಡಲಾಗುತ್ತದೆ. ಮೂರು ತಿಂಗಳಲ್ಲಿ ಈ ಘಟಕ ಪ್ರಾರಂಭವಾಗುತ್ತದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ 79 ವಯಸ್ಸಿನಲ್ಲೂ ಸಹಿತ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರಿಗೆ ವಯಸ್ಸಾದ ಕಾರಣ ಅವರು ಎಲ್ಲೆಡೆ ಈ ಪರಿಸ್ಥಿತಿಯಲ್ಲಿ ಓಡಾಡಬೇಕು ಎಂದಿಲ್ಲ. ಒಂದೆಡೆ ಕುಳಿತು ಸಮಸ್ಯೆಯನ್ನು ಪರಿಹರಿಸುವುದು ಸಿಎಂ ಅವರ ಕೆಲಸವಾಗಿದೆ. ಪ್ರತಿ ದಿನ ಮೂರು ಹೊತ್ತು ಅವರು ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ, ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೋವಿಡ್- 19 ಇಂದು ಎಲ್ಲೆಡೆ ಹಬ್ಬುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ.
ಕೋವಿಡ್ ಎವರೇಜ್ ತೆಗೆದುಕೊಂಡರೆ ವಿಜಯಪುರ ಜಿಲ್ಲೆ 27 ಸ್ಥಾನದಲ್ಲಿದೆ. ಕೋವಿಡ್ ತಡೆಗಟ್ಟುವಲ್ಲಿ ವಿಜಯಪುರ ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಮುಖ್ಯವಾಗಿ ಆಕ್ಸಿಜನ್ ರೆಮ್ಡಿಸಿವಿರ್ ಪೂರೈಸಲು ಮುಖ್ಯಮಂತ್ರಿಗಳು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ನೋಡಲ್ ಅಧಿಕಾರಿಗಳನ್ನು ನೇಮಿಸಿ ಮಾಹಿತಿ ಪಡೆಯುತ್ತಿದ್ದಾರೆ ಎಂದರು.
ಅಂದಾಜು 5800 ರಷ್ಟು ರೆಮ್ಡಿಸಿವರ್ ಇಂಜಿಕ್ಷನ್ ಜಿಲ್ಲೆಗೆ ಬಂದಿದೆ. ವೈದ್ಯರ ಅನುಮತಿ ಪಡೆಯದೇ ರೆಮ್ಡಿಸಿವಿರ್ ಇಂಜಿಕ್ಷನ್ ಪಡೆಯಬಾರದು. ಬಳ್ಳಾರಿ ಹಾಗೂ ಧಾರವಾಡದಿಂದ ಸಹಿತ ಆಕ್ಸಿಜನ್ ತರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು 20 ಕಂಪನಿಗಳಿಗೆ ದೇಶದಲ್ಲಿ ರೆಮ್ಡಿಸಿವಿರ್ ತಯಾರಿಸಲು ಅನುಮತಿ ನೀಡಿದ್ದಾರೆ. ಸದ್ಯ ಕರ್ನಾಟಕದಲ್ಲಿ 2 ಕಂಪನಿಗಳು ರೆಮ್ಡಿಸಿವಿರ್ ತಯಾರಿಸಲಾಗುತ್ತಿದೆ ಎಂದರು.
ಬಿಎಲ್‌ಡಿಇ ಆಸ್ಪತ್ರೆಗೆ ರೆಮ್ಡಿಸಿವಿರ್ ಔಷಧಿ ಸರಿಯಾಗಿ ಕೊಡುತ್ತಿಲ್ಲ ಎಂದು ಎಂ.ಬಿ. ಪಾಟೀಲ ಹೇಳಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಎಂ.ಬಿ. ಪಾಟೀಲ ಅವರ ಬಗ್ಗೆ ನಮಗೆ ಗೌರವವಿದೆ. ಅವರು ಒಂದು ಆಸ್ಪತ್ರೆ ನಡೆಸುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಪಕ್ಷಾತೀತವಾಗಿ ಕೊರೋನಾ ತಡೆಗಟ್ಟಲು ಪ್ರಯತ್ನ ಮಾಡಬೇಕಿದೆ, ಇದಕ್ಕೆ ಎಲ್ಲರ ಸಹಕಾರ ಅವಶ್ಯಕ. ಇಂದು ಎಲ್ಲರಿಗೂ ಇಂಜಿಕ್ಷನ್ ಅವಶ್ಯಕತೆ ಇಲ್ಲ.
ವೈದ್ಯರ ಸಲಹೆ ಮೇರೆಗೆ ಇಂಜಿಕ್ಷನ್ ಪಡೆಯಬೇಕು. ಅವಶ್ಯಕತೆಗೆ ತಕ್ಕಂತೆ ಅವರಿಗೆ ವಿತರಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss