ಕೆಂಪು ಸೀರೆಯುಟ್ಟು ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ: ಶಕ್ತಿ, ಆತ್ಮವಿಶ್ವಾಸದ ಪ್ರತೀಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ರ ಕೇಂದ್ರ ಬಜೆಟ್ ಮಂಡನೆಗೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇವೆ. ಸಚಿವೆ ನಿರ್ಮಲಾ ಸೀತಾರಾಮನ್ ಎಂತಹ ಸೀರೆ ಉಟ್ಟಿದ್ದಾರೆ ಎನ್ನುವ ಬಗ್ಗೆ ಚರ್ಚೆಗಳು ಸಾಮಾನ್ಯ.

ಈ ಬಾರಿ ಸಚಿವೆ ಕೆಂಪು ಬಣ್ಣದ, ಕಂದು ಬಾರ್ಡರ್‌ನ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2019 ರಿಂದಲೂ ಸಚಿವೆ ನಿರ್ಮಲಾ ಕೈಮಗ್ಗದ ಸೀರೆಗಳನ್ನೇ ಧರಿಸುತ್ತಾ ಬಂದಿದ್ದಾರೆ.

ಕೈಮಗ್ಗ ಸೀರೆಗಳ ಉತ್ತೇಜನಕ್ಕಾಗಿ ಸದಾ ಈ ರೀತಿ ಸೀರೆಗಳನ್ನೇ ಉಟ್ಟಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಕೆಂಪು ಬಣ್ಣವನ್ನು ದುರ್ಗಾದೇವಿಗೆ ಹೋಲಿಸಲಾಗುತ್ತದೆ. ಕೆಂಪು ಶಕ್ತಿ ಹಾಗೂ ಧೈರ್ಯದ ಸಂಕೇತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!