ಸಚಿವರು, ಸಂಸದರು, ಶಾಸಕರಿಗೆ ಗೋವುಗಳನ್ನು ದತ್ತು ಪಡೆದು ಸಂರಕ್ಷಿಸಲು ಪತ್ರ ಬರೆದ ಸಚಿವ ಪ್ರಭು ಚೌಹಾಣ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ರಾಜ್ಯ ಸರಕಾರ ಇದೀಗ ಮತ್ತೊಂದು ವಿನೂತನ ಕಾರ್ಯಕ್ರಮಕ್ಕೆ ಸಜ್ಜಾಗಿದ್ದು, ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಸಚಿವರು, ಸಂಸದರು, ಶಾಸಕರಿಗೆ ಪತ್ರ ಬರೆದಿದ್ದಾರೆ.
ಅದೇನೆಂದರೆ, ಕರ್ನಾಟಕದಲ್ಲಿ ಗೋವುಗಳನ್ನು ಸಂರಕ್ಷಿಸಲು ಸಚಿವರು, ಜನಪ್ರತಿನಿಧಿಗಳು, ಚಿತ್ರರಂಗದ ಕಲಾವಿದರು, ಉದ್ಯಮಿಗಳು, ಸಂಘ-ಸಂಸ್ಥೆಗಳು ಗೋವುಗಳನ್ನು ದತ್ತು ಪಡೆದು ಪೋಷಣೆಗೆ ಮುಂದಾಗಬೇಕು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಮನವಿ ಮಾಡಿದ್ದಾರೆ.
ಈಗಾಗಲೇ ಗೋವುಗಳನ್ನು ದತ್ತು ಪಡೆಯುವ ಅಭಿಯಾನವನ್ನು ಆರಂಭಿಸಲಾಗಿದ್ದು, ಇದರ ಭಾಗವಾಗಿ ಗೋ ಮಾತೆಯನ್ನು ರಕ್ಷಿಸಲು ಗೋ ಪ್ರೇಮಿಗಳಾದ ಎಲ್ಲರೂ ಗೋವುಗಳನ್ನು ದತ್ತು ಪಡೆದು,ಹಸುಗಳ ಪೋಷಣೆ ಮಾಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಪತ್ರ ಬರೆದಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಜನ್ಮದಿನದ ಅಂಗವಾಗಿ ರಾಷ್ಟ್ರೋತ್ಥಾನ ಗೋ ಶಾಲೆಯ 11 ಗೋವುಗಳನ್ನು ದತ್ತು ಪಡೆಯುವ ಮೂಲಕ ಗೋ ಸಂತತಿಯ ರಕ್ಷಣೆಗೆ ಕರೆ ನೀಡಿದ್ದಾರೆ. ಈ ಆದರ್ಶವನ್ನು ಎಲ್ಲ ಸಂಸದರು, ಶಾಸಕರು, ವಿವಿಧ ವಲಯಗಳ ಗಣ್ಯರು ಪಾಲಿಸುವ ಮೂಲಕ ಗೋ ಸಂರಕ್ಷಣೆಗೆ ಮುಂದಾಗುವಂತೆ ಅವರು ಕರೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!