ಹೊಸದಿಗಂತ ವರದಿ, ಕೊಪ್ಪಳ:
ತೋಟಗಾರಿಕೆ ಇಲಾಖೆ , ಜಿಲ್ಲಾ ಪಂಚಾಯತ್ . ಕೊಪ್ಪಳ, ಆತ್ಮ ನಿರ್ಭರ ಭಾರತ ಯೋಜನೆಯಡಿ, ಜಿಲ್ಲೆಗೆ ಆಯ್ಕೆಯಾದ “ಒಂದು ಜಿಲ್ಲೆ ಒಂದು ಬೆಳೆ” ಸೀಬೆ (ಪೇರಲ) ತಾಂತ್ರಿಕ ಕಾರ್ಯಾಗಾರಕ್ಕೆ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಆ.ಶಂಕರ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರೈತರ ಬದುಕು ಹಸನಾಗಲು ಸರಕಾರ ಮುಂದಾಗಿದೆ. ಈ ಭಾಗದ ರೈತರ ಅನುಕೂಲಕ್ಕಾಗಿ ಕ್ಲಸ್ಟರ್ ಮಾಡುವ ಚಿಂತನೆ ಮಾಡುವುದು ಸಂತೋಷದಾಯಕವಾಗಿದೆ. ಅದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ ಅವರು, ರೈತರ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡುವ ಕೆಲಸ ಸರಕಾರ ಮಾಡಲು ಮುಂದಾಗಿದೆ. ಒಂದು ಬೆಳೆಯ ಜೊತೆ ಇನ್ನೊಂದು ಬೆಳೆ ತರಲು ಕೇಂದ್ರದ ಗಮನಕ್ಕೆ ತರಲಾಗುವುದು. ಅದರಂತೆ ರಾಜ್ಯದಲ್ಲಿ ಬೆಳೆದ ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಕುರಿತು ಸರಕಾರದ ಜೋತೆ ಚಿಂತನೆ ಮಾಡಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಜಿಲ್ಕಾಧಿಕಾರಿ ಎಸ್. ವಿಕಾಸ್ ಕಿಶೋರ್ ಮಾತನಾಡಿ, ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ಅನೇಕ ಕ್ರಮ ಕೈಗೊಂಡಿದೆ. ಆದರೆ ಅದಕ್ಕೆ ಜಿಲ್ಲಾಡಳಿತ ಕೂಡ ಸಹಾಯ ಹಸ್ತ ನೀಡಲು ಸಿದ್ದವಿದೆ. ರೈತರು ಸಬ್ಸಿಡಿಯೋಜನೆಗಳು ಇವೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರಿ ಉಣ್ಣಿಮೆ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್, ಅಮರೇಶ ಕರಡಿ, ತೋಟಗಾರಿಕೆ ನಿರ್ದೇಶಕ ಮಂಜುನಾಥ ನಾರಾಯಣಪುರ, ವೇಂಕಟೇಶ ಕೃಷ್ಣ, ಕೃಷಿ ಇಲಾಖೆ ಉಪ ನಿರ್ಧೇಶಕ ಶಿವಕುಮಾರ, ತೋಟಗಾರಿಕೆ ಇಲಾಖೆ ಉಪನಿರ್ಧೇಶಕ ಕೃಷ್ಣ ಉಕ್ಕುಂದ, ವಿಜ್ಣಾನಿ ಪುಷ್ಪಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.