ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬ್ರಿಟನ್ ಪ್ರವಾಸದಲ್ಲಿರುವ ಸಚಿವ ಎಸ್ ಜೈಶಂಕರ್ ತಂಡದಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬ್ರಿಟನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ತಂಡದಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಸ್ವತಃ ಎಸ್ ಜೈಶಂಕರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಲಂಡನ್ ನಲ್ಲಿ ತಮ್ಮ ಬಾಕಿ ಕೆಲಸಗಳನ್ನು ವರ್ಚ್ಯುಯಲ್ ಸಭೆಯ ಮೂಲಕವೇ ನಿರ್ವಹಿಸುವುದಾಗಿ ತಿಳಿಸಿದ್ದಾರೆ. ‘ಇಂದು ನಡೆಯಬೇಕಿರುವ ಜಿ7 ಸಭೆಯಲ್ಲೂ ವರ್ಚ್ಯುಯಲ್ ಮೋಡ್ ನಲ್ಲೇ ಭಾಗವಹಿಸುತ್ತೇನೆ’ ಎಂದು ಜೈಶಂಕರ್ ತಿಳಿಸಿದ್ದಾರೆ.
ಜಿ 7 ರಾಷ್ಟ್ರಗಳ ವಿದೇಶಾಂಗ ಹಾಗೂ ಅಭಿವೃದ್ಧಿ ಸಚಿವರ ಸಭೆಗಾಗಿ ಬ್ರಿಟನ್ ನ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ ಅವರ ಆಹ್ವಾನದ ಮೇರೆಗೆ ಮೇ.03 ರಿಂದ 7 ವರೆಗೆ ಜೈಶಂಕರ್ ಬ್ರಿಟನ್ ಪ್ರವಾಸದಲ್ಲಿದ್ದಾರೆ.
ರಾಷ್ಟ್ರಗಳ ಸದಸ್ಯರು ಭಾಗವಹಿಸಲಿರುವ ಔಪಚಾರಿಕ ಸಭೆಯಲ್ಲಿ ಜೈಶಂಕರ್ ಭಾಗಿಯಾಗಬೇಕಿತ್ತು. ಬ್ರಿಟನ್ ನ ವಿದೇಶಾಂಗ ಸಚಿವರೊಂದಿಗಿನ ಜೈಶಂಕರ್ ನಡೆಸಬೇಕಿದ್ದ ದ್ವಿಪಕ್ಷೀಯ ಸಭೆಯೂ ಈಗ ವರ್ಚ್ಯುಯಲ್ ಮೋಡ್ ನಲ್ಲಿ ನಡೆಯುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss