ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಸಚಿವ ಸತೀಶ್ ಶರ್ಮಾ ಶಿವಲಿಂಗದ ಬಳಿ ಕೈತೊಳೆದ ವಿವಾದಕ್ಕೆ ಸಿಲುಕಿದ್ದಾರೆ. ಬಾರಾಬಂಕಿಯ ರಾಮ್‌ಪುರದಲ್ಲಿ ಇರುವ ಲೋಧೇಶ್ವರ ಮಹಾದೇವ ದೇಗುಲಕ್ಕೆ ಭೇಟಿ ನೀಡಿದಾಗ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಸುನೀಲ್ ಸಿಂಗ್ ಕಮೆಂಟ್ ಮಾಡಿದ್ದು, ಈ ರೀತಿ ಮಾಡಿರುವುದು ತಪ್ಪು, ಈ ಕೂಡಲೇ ಕ್ರಮ ಕೈಗೊಳ್ಳಲೇಬೇಕು ಎಂದಿದ್ದಾರೆ.
ವಿಡಿಯೋದಲ್ಲೇನಿದೆ?
ಸಚಿವ ಸತೀಶ್ ಶರ್ಮಾ ದೇಗುಲಕ್ಕೆ ಭೇಟಿ ನೀಡಿದ್ದು, ಅಲ್ಲಿ ಪೂಜೆ ವೇಳೆ ಅರ್ಚಕರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅವರು ಹೇಳಿದಂತೆ ಸಚಿವರು ಮಾಡಿದ್ದಾರೆ.
शिवलिंग पर हाथ धो रहे हैं योगी के मंत्री सतीश शर्मा? बाराबंकी के रामपुर स्थित पौराणिक लोधेश्वर महादेव मंदिर का वीडियो वायरल, साथ में मंत्री जितिन प्रसाद भी मौजूद. pic.twitter.com/x4JsQGIxBm
— Utkarsh Singh (@UtkarshSingh_) September 3, 2023