ಮೈಸೂರು ಅರಮನೆ ಆವರಣದಲ್ಲಿನ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಚಿವ ಸೋಮಶೇಖರ್!

ಹೊಸ ದಿಗಂತ ವರದಿ,ಮೈಸೂರು:

ಇಲ್ಲಿನ ಅಂಬಾವಿಲಾಸ ಆವರಣದಲ್ಲಿ 12ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕೃತಗೊoಡ ಕಾಶಿ ವಿಶ್ವನಾಥ ದೇವಾಲಯ, ಸ್ವದೇಶೀ ನಿರ್ಮಿತ ಒಂದೇ ಮಾತರಂ ರೈಲು ಗಾಡಿ, ಅಮರ್ ಜವಾನ್ ಸ್ಮಾರಕ, ಹೂವಿನಿಂದ ಅಲಂಕೃತಗೊoಡ ಆನೆ ಸೇರಿದಂತೆ ಕಲಾಕೃತಿಗಳ ವೀಕ್ಷಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಶನಿವಾರ ಸಂಜೆ ಉದ್ಘಾಟಿಸಿದರು.
ನಂತರ ಮಾತನಾಡಿ, ಚಳಿಗಾಲದ ಉತ್ಸವದಲ್ಲಿ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಸುವುದೇ ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಾಗಿ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕೊರೋನಾ ಬಗ್ಗೆ ಯಾವುದೇ ಆತಂಕ ಪಡುವ ಪ್ರಮೇಯವಿಲ್ಲ, ವರ್ಷದ ಅಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಆರೋಗ್ಯ ಇಲಾಖೆ ನೀಡುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಲಾಗುವುದು ಎಂದರು.
ಈ ವೇಳೆ ಶಾಸಕ ಎಸ್.ಎ.ರಾಮದಾಸ್, ನಗರ ಪಾಲಿಕೆಯ ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!