ಬಾಳೆಎಲೆಯಲ್ಲಿ ಸಾವಯವ ತರಕಾರಿ ಫೋಟೋ ಪೋಸ್ಟ್‌: ಸಚಿವರ ಆಲೋಚನೆಗೆ ನೆಟ್ಟಿಗರು ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ನಾಗಾಲ್ಯಾಂಡ್ ಸಚಿವ ತೆಮ್ಜನ್ ಇಮ್ನಾ ಅಲಂಗ್ ಅವರ ಹೆಸರು ಹೇಳುತ್ತಿದ್ದಂತೆ ಮನಸ್ಸಿಗೆ ಆರೋಗ್ಯಕರ ಹಾಸ್ಯ ಪ್ರಜ್ಞೆ ನೆನಪಿಗೆ ಬರುತ್ತದೆ. ಏಕೆಂದರೆ ಅದೇ ಅವರ ಶೈಲಿ. ವಿಡಂಬನೆಯನ್ನೂ ಸಹ ಸಕಾರಾತ್ಮಕವಾಗಿ ತೆಗೆದುಕೊಳ್ಳುವುದರಲ್ಲಿ ಅವರು ನಿಪುಣರು. ನೈಸ್ ಸೆನ್ಸ್ ಆಫ್ ಹ್ಯೂಮರ್‌ಗೆ ನೆಟ್ಟಿಗರು ಮಾರು ಹೋಗಿದ್ದಾರೆ. ನಾಗಾಲ್ಯಾಂಡ್ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜನ್ ಇಮ್ನಾ ಅಲಂಗ್‌ ಅವರನ್ನು ಕುರಿತು ನೆಟ್ಟಿಗರು ಕೇಳುವ ಪ್ರಶ್ನೆಗೆ ತಮ್ಮದೇ ದಾಟಿಯಲ್ಲಿ ಉತ್ತರಿಸುತ್ತಾರೆ.

ನಾಗಾಲ್ಯಾಂಡ್‌ನಲ್ಲಿ ಸಸ್ಯಾಹಾರ ದೊರಕುತ್ತದೆಯೇ? ಎಂಬ ಪ್ರಶ್ನೆಗೆ ಸಚಿವ ಫೋಟೋ ಸಮೇತ ಉತ್ತರಿಸಿದರು. ಆ ಫೋಟೋದಲ್ಲಿ, ಅವರು ಬಾಳೆ ಎಲೆಗಳಲ್ಲಿ ಪ್ಯಾಕ್ ಮಾಡಿದ ತಾಜಾ, ತಾಜಾ ಸಾವಯವ ತರಕಾರಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೊಪ್ಪು, ಹೀರೇಕಾಯಿ, ಅಣಬೆ, ಹಾಗಲಕಾಯಿ, ಬೆಂಡೇಕಾಯಿಂದ ಹಿಡಿದು ಬದನೆಕಾಯಿವರೆಗೂ ಇರುವ ಎಲ್ಲವನ್ನು ನೀಟಾಗಿ ಪ್ಯಾಕ್ ಮಾಡಿದ ತರಕಾರಿಗಳ ಫೋಟೋಗಳನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಸಸ್ಯಾಹಾರಿ ಆಹಾರ ಲಭ್ಯವಿದೆಯೇ ಎಂದು ಯಾರೋ ಕೇಳಿದರು ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ತರಕಾರಿ ಹೊಲದಿಂದ ನೇರವಾಗಿ ಬಂದವು ಪ್ಲಾಸ್ಟಿಕ್ ಚೀಲದಲ್ಲಿ ಅಲ್ಲ, ಬಾಳೆ ಎಲೆಯಲ್ಲಿ ಸುತ್ತಿ ತರಿಸಿದ ಸಾವಯವ ತರಕಾರಿ ಎಂದು ಸಚಿವ ಅಲಂಗ್ ಹೇಳಿದರು. ಈ ಪೋಸ್ಟ್‌ಗೆ ನೆಟಿಜನ್‌ಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಜಾ ತರಕಾರಿಗಳು ಬಾಯಲ್ಲಿ ನೀರೂರಿಸುತ್ತದೆ ಎಂದು ಕಮೆಂಟ್‌ ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!