Monday, July 4, 2022

Latest Posts

ಮಾಜಿ ಸಚಿವ, ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನ: ಪಾರ್ಥಿವ ಶರೀರದ ದರ್ಶನ ಪಡೆದ ಸಚಿವರು, ಅಭಿಮಾನಿಗಳು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಹಾವೇರಿ:

ಮಂಗಳವಾರ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾಗಿದ್ದ ಹಿರಿಯ, ಮುತ್ಸದ್ದಿ ರಾಜಕಾರಣಿ ಮಾಜಿ ಸಚಿವ, ಹಾನಗಲ್ಲಿನ ಬಿಜೆಪಿ ಶಾಸಕ ಸಿ.ಎಂ.ಉದಾಸಿ ಅವರ ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನ 1.30 ನಿಮಿಷಕ್ಕೆ ಹಾವೇರಿಗೆ ಆಗಮಿಸಿ ಮುಂದೆ ಹಾನಗಲ್ಲಿನತ್ತ ಪ್ರಯಾಣ ಬೆಳೆಸಿತು.

ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಪಾರ್ಥಿವ ಶರೀರವನ್ನು ತಂದಿದ್ದ ವಾಹನದಲ್ಲೇ ಕೆಲ ನಿಮಿಷಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.

ಈ ಸಂದರ್ಭದಲ್ಲಿ ಎಸ್ಸಿ,ಎಸ್ಟಿ ಬುಡಕಟ್ಟು ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ, ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ, ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಮುತ್ತಣ್ಣ ಯಲಿಗಾರ, ಪರಮೇಶಪ್ಪ ಮೇಗಳಮನಿ, ಅಪಾರ ಸಂಖ್ಯೆಯ ಅಭಿಮಾನಿಗಳು ಅಂತಿಮ ದರ್ಶನ ಪಡೆದುಕೊಂಡರು.

ಪಾರ್ಥಿವ ಶರೀರದ ವಾಹನದಲ್ಲಿ ಸಿ.ಎಂ.ಉದಾಸಿ ಅವರ ಪುತ್ರ ಸಂಸದ ಶಿವಕುಮಾರ ಉದಾಸಿ ಆಗಮಿಸಿದ್ದ ಗಣ್ಯರು, ಅಭಿಮಾನಿಗಳಿಗೆ ಕೈಮುಗಿದು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದರು. ವಾಹನದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸಹ ಆಗಮಿಸಿದ್ದರು.

ರಾಣೇಬೆನ್ನೂರಿನಿಂದ ನಗರಕ್ಕೆ ಉದಾಸಿ ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ವೃತ್ತದಲ್ಲಿ ಅವರ ಅಭಿಮಾಣಿಗಳ ಸಂಖ್ಯೆ ಅಧಿಕವಾಗಲಾರಂಭಿಸಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂಧಿ ಜನತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಸಾರಿ ಸಾರಿ ಹೇಳುತ್ತಿದ್ದರೂ ಜನತೆ ಮಾತ್ರ ಅದ್ಯಾವುದನ್ನು ಲಕ್ಷಿಸದೇ ಸಿ.ಎಂ.ಉದಾಸಿ ಅವರ ಅಂತಿಮ ದರ್ಶನಕ್ಕೆ ಮುಗಿಬೀಳುತ್ತಿರುವುದು ಕಂಡುಬಂದಿತು. ಜನತೆ ಸಂಖ್ಯೆ ಅಧಿಕವಾಗುತ್ತಿರುವುದನ್ನು ಕಂಡು ಪಾರ್ಥಿವ ಶರೀರವಿದ್ದ ವಾಹನ ಹಾನಗಲಿನತ್ತ ಪ್ರಯಾಣ ಬೆಳೆಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss