Thursday, August 18, 2022

Latest Posts

ಅಲ್ಪಸಂಖ್ಯಾತರನ್ನು ಮತ ಹಾಕುವುದಕ್ಕೆ ಮಾತ್ರ ಸೀಮಿತಗೊಳಿಸಿದ ಕಾಂಗ್ರೆಸ್ : ಸಚಿವ ಗೋವಿಂದ ಕಾರಜೋಳ

ಹೊಸ ದಿಗಂತ ವರದಿ, ಹಾವೇರಿ:

ದೇಶದಲ್ಲಿ ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್, ದೀನ ದಲಿತರ ಅಭಿವೃದ್ಧಿ ಮಾಡಲಿಲ್ಲಾ. ಅಲ್ಪಸಂಖ್ಯಾತರನ್ನು ಮತ ಹಾಕುವುದಕ್ಕೆ ಸೀಮಿತಗೊಳಿಸಿತು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಜಿಲ್ಲೆಯ ಹಾನಗಲ್ಲ ಪಟ್ಟಣದ ಸಾವಿತ್ರಮ್ಮ ಉದಾಸಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷ ಅಧಿಕಾರ ಮಾಡಿದ ಕಾಂಗ್ರೆಸ್ ಬಡವರ ಕಲ್ಯಾಣಕ್ಕಾಗಿ ಯಾವ ಯೋಜನೆಗಳನ್ನು ಜಾರಿಗೆ ತರಲಿಲ್ಲಾ. ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಯಾವ ಚಿಂತನೆಯನ್ನು ಮಾಡಲಿಲ್ಲಾ. ಕಾಂಗ್ರೆಸ್ ಎಂದೂ ದಲಿತರು ಹಾಗೂ ಅಲ್ಪಸಂಖ್ಯಾತರು ಶಿಕ್ಷಣ ಪಡೆಯಬಾರದು ಎನ್ನುವ ಉದ್ದೇಶ ಹೊಂದಿದೆ. ಈ ಸಮುದಾಯದವರನ್ನು ಕೇವಲ ವೋಟ್ ಬ್ಯಾಂಕ್ಗೆ ಬಳಕೆ ಮಾಡುತ್ತಾ ಕಾಂಗ್ರೆಸ್ ಬಂದಿದೆ ಎಂದರು.
ಕಾಂಗ್ರೆಸ್ ಬಳಿ ಹೇಳಿಕೊಳ್ಳಲು ಯಾವ ಸಾಧನೆಗಳು ಇಲ್ಲಾ‌. ಹೀಗಾಗಿ ಸುಳ್ಳು ಹೇಳುವುದರ ಜೊತೆಗೆ ಕೆಟ್ಟಪದಗಳನ್ನು ಬಳಕೆ ಮಾಡುತ್ತಿದೆ‌. ಇದು ಸೋಲಿನ ಹತಾಶ ಮನೋಭಾವ ಅವರಲ್ಲಿ ಕಂಡುಬರುತ್ತಿದೆ.
ರಾಜಕಾರಣಿಗಳು ಇತರರಿಗೆ ಮಾದರಿಯಾಗಿರಬೇಕು ಎಂದು ಜನತೆ ಆಸೆ ಪಡುತ್ತಾರೆ. ರಾಜಕಾರಣಿಗಳು ಅಗ್ಗದ ಪ್ರಚಾರಕ್ಕಾಗಿ, ಶಿಳ್ಳೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಕೆಟ್ಟಪದಗಳ ಬಳಕೆ ಮಾಡಬಾರದು ಎಂದರು.
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಎರಡು ಬಾರಿ ಕಾಂಗ್ರೆಸ್ ಸೋಲಿಸಿತು. ಅವರನ್ನು ಪಾರ್ಲಿಮೆಂಟ್ ಕಟ್ಟಿಯನ್ನು ಹತ್ತದ ಹಾಗೆ ಕಾಂಗ್ರೆಸ್ ನಾಯಕರು ಮಾಡಿದರು. ಅವರ ಜೀವಿತ ಅವಧಿಯಲ್ಲಿ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲಾ. ಇದಕ್ಕಾಗಿ ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು. ಅವರು ದೆಹಲಿಯಲ್ಲಿ ಮರಣ ಹೊಂದಿದರೂ ಅವರಿಗೆ ಅಂತ್ಯಸಂಸ್ಕಾರ ಮಾಡಲು ದೆಹಲಿಯಲ್ಲಿ ಆರಡಿ ಮೂರಡಿ ಜಾಗ ನೀಡಲಿಲ್ಲಾ. ಮುಂಬಯಿಯ ಸಮುಸ್ರ ದಡದಲ್ಲಿ ಅನಾಥರ ಅಂತ್ಯ ಸಂಸ್ಕಾರ ಮಾಡುದಂತೆ ಮಾಡಿದರು ಎಂದು ಹೇಳಿದರು.
ಜನರಿಗೆ ಅಕ್ಕಿ, ಕೋಳಿ ಕೊಟ್ಟೆ ಬೇಡ. ದೀನದಲಿತರನ್ನು ಶಿಕ್ಷಣವಂತರನ್ನಾಗಿ ಮಾಡಿ ಉದ್ಯೋಗ ಸಿಗುವಂತೆ ಮಡಬೇಕು. ಬೇಡುವ ಕೈ ಬದಲು ಕೊಡುವ ಕೈ ಅವರದಾಗಬೇಕು. ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು, ಆದರೆ ಸಿದ್ದರಾಮಯ್ಯ ತನ್ನದೆ ಎಂದು ಸುಳ್ಳು ಹೆಳುತ್ತಿದ್ದಾರೆ‌. ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮೊದಲು ಒಂದು ಕೇಜಿಗೆ 3 ರೂದಂತೆ 30 ಕೆಜಿ ಅಕ್ಕಿ ನೀಡುತ್ತಿದ್ದೆವು. ಆದರೆ ಉಚಿತ ನೀಡುತ್ತೇನೆಂದು ಹೇಳಿ ಕೇವಲ ೭ ಕೇಜಿಗೆ ತಂದು ನಿಲ್ಲಿಸಿದರು. ಇದರಿಂದ ದೀನ ದಲಿತರು, ಬಡವರಿಗೆ ಅನ್ಯಾಯವಾಯಿತು ಎಂದು ತಿಳಿಸಿದರು.
ಕ್ಷೀರ ಭಾಗ್ಯದ ಬಗ್ಗೆ ಮಾತಾನಾಡುತ್ತಾರೆ. ಹಾಲಿಗೆ ಪ್ರೋತ್ಸಾಹ ಧನ ಪ್ರಾರಂಭಮಾಡಿದ್ದು, ಯಡಿಯೂರಪ್ಪ ಅವರು. ಕೃಷಿ ಭಾಗ್ಯ ಪ್ರಾರಂಭ ಆಗಿದ್ದು ಯಡಿಯೂರಪ್ಪ ಕಾಲದಲ್ಲಿ. ಬಡ್ಡಿ ಇಲ್ಲದೆ ರೈತರಿಗೆ ಸಾಲ ನೀಡುವ ಕೆಲಸ ಯಡಿಯೂರಪ್ಪ ಕಾಲದಲ್ಲಿ ಆಂಭಿಸಲಾಗಿದೆ. ಸುಳ್ಳು ಹೇಳುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಸಿದ್ದರಯ್ಯ ವಿರುದ್ಧ ಕಿಡಿಕಾರಿದರು.
ಅಲ್ಪಸಂಖ್ಯಾತರು ಕುರುಡು ನಂಬಿಕೆಯಿಂದ ಕಾಂಗ್ರೆಸ್ ನಂಬಿ ಹಾಳಾಗ ಬೇಡಿ. ಬಿಜೆಪಿ ದಿನದಲಿತರ ಪರವಾಗಿದೆ. ನಿಮ್ಮೆಲರ ಪರವಾಗಿದೆ. ನಿಮ್ಮನ್ನು ಕಾಂಗ್ರೆಸ್ ಎಂದೂ ಮನುಷ್ಯರನ್ನಾಗಿ ನೋಡಿಲ್ಲಾ. ನಾವು ನಿಮ್ಮನ್ನು ಮನುಷ್ಯರನ್ನಾಗಿ ಸದಾ ಕಾಲ ನೋಡುತ್ತೇವೆ. ಸಿಎಂ ಇಬ್ರಾಹಿಂ ಅವರನ್ನು ಕಾಮಿಡಿಯನ್ ತರ ನೋಡಿದೆ ಕಾಂಗ್ರೆಸ್. ದೇಶದ ಮುಸ್ಲಿಂರಿಗೆ ಅಲೆಮಾರಿಗಳನ್ನಾಗಿ ಮಾಡಿ ಅವರಿಗೆ ಶಿಕ್ಷಣ ನೀಡದೆ ಇರುವ ಸ್ಥಿತಿಯಲ್ಲೆ ಬಿಟ್ಟಿದೆ. ಅನೇಕ ಯೋಜನೆಗಳನ್ನು ನಿಮ್ಮ ಪರವಾಗಿ ಬಿಜೆಪಿ ತಂದಿದೆ ಅವುಗಳನ್ನು ಬಳಕೆ‌ ಮಾಡಿಕೊಳ್ಳಿ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!