ಮಿರಾಮ್ ಟ್ಯಾರೋನ್‌ನ ಕೈ ಕಟ್ಟಿ, ವಿದ್ಯುತ್ ಶಾಕ್ ನೀಡಿ ಹಿಂಸಿಸಿತ್ತು ಚೀನಾ ಸೇನೆ: ಸಂಸದ ತಪೀರ್ ಗಾವೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣಾಚಲ ಪ್ರದೇಶದ 17 ವರ್ಷದ ಬಾಲಕ ಮಿರಾಮ್ ಟ್ಯಾರೋನ್‌ನನ್ನು ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ ಅಪಹರಣ ಮಾಡಿ, ನಂತರ ಭಾರತಕ್ಕೆ ವಾಪಾಸು ಕಳಿಸಿತ್ತು. ಇದೀಗ ಚೀನಾ ಸೇನೆ ತನ್ನನ್ನು ಕಟ್ಟಿಹಾಕಿತ್ತು, ವಿದ್ಯುತ್ ಶಾಕ್ ನೀಡಿತ್ತು ಎಂದು ಮಿರಾಮ್ ಹೇಳಿರುವುದಾಗಿ ಅರುಣಾಚಲ ಪ್ರದೇಶ ಬಿಜೆಪಿ ಸಂಸದ ತಪೀರ್ ಗಾವೋ ಹೇಳಿದ್ದಾರೆ.

ಮೊದಲ ದಿನ ನನಗೆ ಹಿಂಸೆ ನೀಡಿದ್ದರು. ಕೈ ಕಟ್ಟಿ ದಟ್ಟವಾದ ಅರಣ್ಯದೊಳಗೆ ಕರೆದೊಯ್ದರು. ನಾನು ನನ್ನ ಸ್ನೇಹಿತ ಬೇಟೆಯಾಡುತ್ತಾ ಹೋದಾಗ ನನ್ನನ್ನು ಪಿಎಲ್‌ಎ ಸೈನಿಕರು ಬಂಧಿಸಿದರು. ಮೊದಲಿಗೆ ಅವರು ಯಾರು ಎನ್ನುವುದೇ ನನಗೆ ತಿಳಿಯಲಿಲ್ಲ. ಕತ್ತಲಲ್ಲಿ ಕೈ ಕಟ್ಟಿ ತಲೆಗೆ ಬಟ್ಟೆ ಹಾಕಿ ಆರ್ಮಿ ಕ್ಯಾಂಪ್‌ಗೆ ಕರೆದೊಯ್ದರು. ಅಲ್ಲಿ ವಿದ್ಯುತ್ ಶಾಕ್ ನೀಡಿದರು ಎಂದು ಮಿರಾಮ್ ಹೇಳಿರುವುದಾಗಿ ತಪೀರ್ ಹೇಳಿದ್ದಾರೆ.

ಕಾನೂನು ಬಾಹಿರವಾಗಿ ಚೀನಾದ ಭೂಪ್ರದೇಶ ಪ್ರವೇಶಿಸಿದ್ದಾನೆ ಎಂದು ಆರೋಪಿಸಿ ಚೀನಾ ಸೇನೆ ಮಿರಾಮ್‌ನನ್ನು ಅಪಹರಿಸಿತ್ತು. ಬಳಿಕ ಭಾರತೀಯ ಸೇನೆ ಆತನನ್ನು ಬಿಡುವಂತೆ ಹೇಳಿತ್ತು. ಇದಾದ 27 ದಿನಗಳ ನಂತರ ಮಿರಾಮ್‌ನನ್ನು ಚೀನಾ ಸೇನೆ ಭಾರತಕ್ಕೆ ಹಸ್ತಾಂತರಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!