ಗಗನಸಖಿ ಜೊತೆ ಮಿಸ್‌ಬಿಹೇವ್: ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ ಸ್ಪೈಸ್‌ಜೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಪ್ರಯಾಣಿಕರೊಬ್ಬರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ.

ಈ ಬಗ್ಗೆ ಸ್ಪೈಸ್‌ಜೆಟ್ ಅಧಿಕೃತ ಹೇಳಿಕೆ ನೀಡಿದ್ದು, ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಅದರಿಂದಾಗಿ ಜಗಳ ಆರಂಭವಾಗಿದೆ. ಹೈದರಾಬಾದ್ ಸ್ಪೈಸ್‌ಜೆಟ್
ವಿಮಾನದಲ್ಲಿ ಪ್ರಯಾಣಿಕರೊಬ್ಬರು ಗಗನಯಾತ್ರಿ ಜತೆ ಮಿಸ್‌ಬಿಹೇವ್ ಮಾಡಿದ್ದಾರೆ. ತಕ್ಷಣ ಗಗನಯಾತ್ರಿ ಭದ್ರತಾ ದಳ ಹಾಗೂ ಇತರೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ನಂತರ ಅವರನ್ನು ಕೆಳಗಿಳಿಸಿ ಭದ್ರತಾ ಸಿಬ್ಬಂದಿ ವಶಕ್ಕೆ ಒಪ್ಪಿಸಲಾಗಿದೆ. ಗಗನಸಖಿಗೆ ಹಿಂಸೆ ಎನಿಸುವ ರೀತಿ ಆಕೆಯ ಅಂಗಾಂಗವನ್ನು ಪ್ರಯಾಣಿಕ ಸ್ಪರ್ಶಿಸಿದ್ದ. ಅಜಾನಕ್ ಆಗಿ ನನ್ನ ಕೈ ಅವರನ್ನು ಮುಟ್ಟಿದೆ ಬೇಕಂತ ಮಾಡಿಲ್ಲ ಎಂದು ಪ್ರಯಾಣಿಕ ಸ್ಪಷ್ಟತೆ ನೀಡಿದ್ದಾರೆ.

ನಂತರ ಆರೋಪಿ ಪ್ರಯಾಣಿಕ ಕ್ಷಮೆ ಕೋರಿ ಲಿಖಿತ ಕ್ಷಮೆಯನ್ನು ನೀಡಿದ್ದಾರೆ. ಆದರೆ ಪ್ರಯಾಣದಲ್ಲಿ ಮತ್ತೆ ಈ ರೀತಿ ಆಗಬಾರದು ಎನ್ನುವ ಕಾರಣಕ್ಕೆ ಆತನನ್ನು ಕೆಳಗೆ ಇಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!