Wednesday, August 10, 2022

Latest Posts

69ನೇ ವಿಶ್ವ ಸುಂದರಿ ಸ್ಪರ್ಧೆ: ಮೂರನೇ ರನ್ನರ್ ಅಪ್ ಸ್ಥಾನ ಪಡೆದ ಉಡುಪಿ ಮೂಲದ ಆ್ಯಡ್ಲಿನ್ ಕ್ಯಾಸ್ಟೆಲಿನೋ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಉಡುಪಿ:

ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ 69ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉಡುಪಿ ಉದ್ಯಾವರ ಮೂಲದ ಆ್ಯಡ್ಲಿನ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
2020ರ ವಿಶ್ವ ಸುಂದರಿ ಕಿರೀಟ ಮಿಸ್ ಮೆಕ್ಸಿಕೊ ಆಂಡ್ರಿಯಾ ಮೆಜಾ ಪಾಲಾಗಿದ್ದು, ಬ್ರೆಝಿಲ್‌ನ ಜೂಲಿಯಾ ಗಾಮಾ 1ನೇ ರನ್ನರ್ ಅಪ್ ಮತ್ತು ಪೆರುವಿನ ಜಾನಿಕ್ ಮ್ಯಾಸೆಟಾ 2ನೇ ರನ್ನರ್ ಅಪ್ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ.
ಉಡುಪಿ ಉದ್ಯಾವರ ಮೂಲದ ಅಲ್ಫೋನ್ಸಸ್ ಕ್ಯಾಸ್ಟೆಲಿನೊ ಮತ್ತು ಮೀರಾ ಕ್ಯಾಸ್ಟೆಲಿನೊ ದಂಪತಿ ಪುತ್ರಿಯಾಗಿರುವ ಆ್ಯಡ್ಲಿನ್ ಕ್ಯಾಸ್ಟೆಲಿನೋಗೆ 22ರ ಹರೆಯ. ಕುವೈತ್ ನಲ್ಲಿ ಹುಟ್ಟಿ ಬೆಳೆದು, ಮುಂಬೈಯ ಸೈಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದಿದ್ದರೂ ಕೊಂಕಣಿ ಭಾಷೆಯ ಮೂಲಕವೇ ದೇವರ ಪೂಜೆ, ಪ್ರಾರ್ಥನೆ ಮಾಡುತ್ತಾರೆ.
ವಿವಿಧ ಆನ್‌ಲೈನ್ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, 2020ರಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ನೇರವಾಗಿ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಪ್ರವೇಶ ಪಡೆಯುವ ಅವಕಾಶ ಪಡೆದುಕೊಂಡಿದ್ದರು. ಬಳಿಕ ಕಳೆದ ವರ್ಷ ಮಾರ್ಚ್‌ನಲ್ಲಿ ಆ್ಯಡ್ಲಿನ್, ಉದ್ಯಾವರ ಕೊರಂಗ್ರಪಾಡಿಯ ಮನೆಗೆ ಆಗಮಿಸಿದ್ದರು. ಉದ್ಯಾವರ ಚರ್ಚ್ ಆವರಣದಲ್ಲಿ ಅವರಿಗೆ ಹುಟ್ಟೂರ ಗೌರವ ಸಲ್ಲಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss