ಯೆಮೆನ್‌ ಮೇಲೆ ಕ್ಷಿಪಣಿ ದಾಳಿ: 5 ಮಂದಿ ಸಾವು, 34 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯೆಮೆನ್‌ ನ ಮಾರಿಬ್‌ ನಗರದ ಮೇಲೆ ತಡರಾತ್ರಿ ಹೌತಿ ಕ್ಷಿಪಣಿ ದಾಳಿ ನಡೆದಿದೆ. ಇದರ ಪರಿಣಾಮ ಐವರು ಮೃತಪಟ್ಟಿದ್ದು, 34 ಮಂದಿ ಗಾಯಗೊಂಡಿದ್ದಾರೆ.
ಯೆಮೆನ್‌ ನ ಅಲ್‌ ಮತಾರ್‌ ಪ್ರದೇಶದ ಮಿಲಿಟರಿ ಕಟ್ಟದ ಸಮೀಪ ಈ ಕ್ಷಿಪಣಿದಾಳಿ ನಡೆದಿದೆ ಎಂದು ವರದಿ ತಿಳಿಸಿದೆ.
ಈ ಮಾರಿಬ್‌ ನಗರ ಯೆಮೆನ್‌ ನ ಭದ್ರಕೋಟೆಯಾಗಿದೆ. ಈ ಪ್ರದೇಶವು ಹೌತಿ ಪಡೆಗಳ ಗುರಿಯಾಗಿತ್ತು. ಈಗಾಗಲೇ ಹೌತಿಗಳು ಸೌದಿ ಅರೇಬಿಯಾದ ಮೇಲೆ ಹಲವು ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿದೆ.
ಅಷ್ಟೇ ಅಲ್ಲದೆ ಕಳೆದ ವಾರ ಯೆಮೆನ್‌ ನ ಸಾದಾ ಜೈಲಿನ ಮೇಲೆ ಬಂಡುಕೋರರು ವೈಮಾನಿಕ ದಾಳಿ ನಡೆಸಿದ್ದು, 100ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!