ಎರಡನೇ ಮಹಾಯುದ್ಧದ ವೇಳೆ ಕಾಣೆಯಾಗಿದ್ದ ವಿಮಾನ 77 ವರ್ಷಗಳ ಬಳಿಕ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡನೇ ಮಹಾಯುದ್ಧದ ವೇಳೆ ಕಾಣೆಯಾದ ವಿಮಾನವೊಂದು ಬರೋಬ್ಬರಿ 77 ವರ್ಷಗಳ ನಂತರ ಪತ್ತೆಯಾಗಿದೆ.

1945ರ ವಿಶ್ವಯುದ್ಧದ ಅಂತ್ಯದ ವೇಳೆ ಸಿ-46 ಹೆಸರಿನ ಸಾರಿಗೆ ವಿಮಾನ ಕಾಣೆಯಾಗಿತ್ತು. ಈ ವಿಮಾನ ದಕ್ಷಿಣ ಚೀನಾದ ಕುನ್ಮಿಂಗ್‌ನಿಂದ 13 ಜನರನ್ನು ಹೊತ್ತು ಸಾಗಿತ್ತು. ಆ ವೇಳೆ ಹವಾಮಾನ ವೈಪರೀತ್ಯದಿಂದ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಭಾರತದ ಅರುಣಾಚಲ ಪ್ರದೇಶದ ವ್ಯಾಪ್ತಿಯಲ್ಲಿ ಈ ವಿಮಾನ ಕಣ್ಮರೆಯಾಗಿತ್ತು.

ಇದೀಗ ವಿಮಾನದ ಅವಶೇಷಗಳು ಹಿಮಾಲಯದ ತಪ್ಪಲಿನಲ್ಲಿ ಪತ್ತೆಯಾಗಿದೆ. ಸಾಕಷ್ಟು ಶೋಧದ ನಂತರ ವಿಮಾನ ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!