ವಧುವಿನ ಮೇಕಪ್ ನಲ್ಲಿ ಎಡವಟ್ಟು: ಬ್ಯೂಟಿ ಪಾರ್ಲರ್ ವಿರುದ್ಧ ಕೇಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಧ್ಯಪ್ರದೇಶದ ಜಬಲ್ಪುರದಲ್ಲಿ ವಧುವಿನ ಮೇಕಪ್ ಸರಿಯಾಗಿ ಮಾಡದ್ದಕ್ಕೆ ಬ್ಯೂಟಿ ಪಾರ್ಲರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾದ ಘಟನೆ ನಡೆದಿದೆ.

ಡಿ.3 ರಂದು ಮದುವೆಯಿತ್ತು. ಈ ಹಿನ್ನೆಲೆಯಲ್ಲಿ ವಧುವಿನ ಕುಟುಂಬಸ್ಥರು ಮೋನಿಕಾ ಮೇಕಪ್ ಸ್ಟುಡಿಯೋಕ್ಕೆ ಕರೆದೊಯ್ದಿದ್ದಾರೆ. ಪಾರ್ಲರ್‌ನಲ್ಲಿದ್ದ ಸಿಬ್ಬಂದಿ ವಧುವಿಗೆ ಕೆಟ್ಟದಾಗಿ ಮೇಕಪ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಧು ಬ್ಯೂಟಿ ಪಾರ್ಲರ್‌ನ ಮಾಲೀಕೆ ಮೋನಿಕಾ ಪಾಠಕ್ ಅವರಿಗೆ ಕರೆ ಮಾಡಿ ಮುಖದ ಅಂದ ಕೆಡಿಸಿದ್ದಕ್ಕೆ ಅಕ್ಷೇಪಿಸಿದ್ದಾಳೆ. ಆದರೆ ಮೋನಿಕಾ ಅವಳಿಗೆ ಕ್ಷಮೆಯಾಚಿಸುವ ಬದಲು ವಧುವನ್ನು ನಿಂದಿಸಿದ್ದಾಳೆ. ಅಷ್ಟೇ ಅಲ್ಲದೇ ಜಾತಿ ನಿಂದನೆಯನ್ನು ಮಾಡಿದ್ದಾಳೆ. ಜೊತೆಗೆ ಮೇಕಪ್‍ನ ಹಣವನ್ನು ಮೊದಲೇ ಪಡೆದಿದ್ದಳು.ಈ ಹಿನ್ನೆಲೆಯಲ್ಲಿ ಕೋಪಗೊಂಡ ವಧು ಹಾಗೂ ಕುಟುಂಬಸ್ಥರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬ್ಯೂಟಿ ಪಾರ್ಲರ್‌ನ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೋನಿಕಾಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!