ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಹೈಕೋರ್ಟ್ ನ ಕಲಾಪಗಳ ನೇರ ಪ್ರಸಾರ ಮಾಡಲಾಗುತ್ತಿದ್ದು, ಇದಕ್ಕೆ ನಿರ್ಬಂಧ ವಿಧಿಸುವಂತೆ ಬೆಂಗಳೂರು ವಕೀಲರ ಸಂಘ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.
ಕೋರ್ಟ್ ಕಲಾಪದ ನೇರಪ್ರಸಾರ ಶೇರ್, ರೆಕಾರ್ಡ್ ಮಾಡುವಂತಿಲ್ಲ. ಆದರೆ ಕೆಲ ಸಾಮಾಜಿಕ ಜಾಲತಾಣಗಳಿಂದ ನೇರಪ್ರಸಾರದ ದುರ್ಬಳಕೆ ಮಾಡಲಾಗುತ್ತಿದೆ.ಹೀಗಾಗಿ ನೇರಪ್ರಸಾರದ ದುರ್ಬಳಕೆ ನಿರ್ಬಂಧ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿದೆ.