ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಲಕ್ನೋ: ಭಾರತೀಯ ವನಿತಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ 10,000 ರನ್ಗಳನ್ನು ಮಾಡಿದ ಸಾಧನೆ ತೋರಿದ್ದಾರೆ. ಇಂತಹ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ ಅವರು.
ಉಳಿದಂತೆ ಇಂಗ್ಲೆಂಡಿನ ಚಾರ್ಲೋಟೆ ಎಡ್ವರ್ಡ್ಸ್ ಅವರು 10,000 ರನ್ಗಳ ಮೈಲಿಗಲ್ಲನ್ನು ದಾಟಿದವರಲ್ಲಿ ಸೇರಿದ್ದಾರೆ. 2016ರಲ್ಲಿ ಕ್ರಿಕೆಟಿನಿಂದ ನಿವೃತ್ತಿ ಹೊಂದಿದ ಎಡ್ವರ್ಡ್ಸ್ 10,273 ರನ್ ಸಂಪಾದಿಸಿದ್ದಾರೆ. ಮಿಥಾಲಿ ರಾಜ್ ಈಗ 10,000 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟಿನಲ್ಲಿ 7000 ರನ್ ಪೂರೈಸಲು ಮಿಥಾಲಿಗೆ ಇನ್ನು ಕೇವಲ 26 ರನ್ ಬೇಕಾಗಿವೆ.
ಮಿಥಾಲಿ 10 ಟೆಸ್ಟ್ಗಳಲ್ಲಿ 663 ರನ್ ಸಂಪಾದಿಸಿದ್ದಾರೆ. ಅವರ ಗರಿಷ್ಠ ಸ್ಕೋರು 214. ಏಕದಿನ ಕ್ರಿಕೆಟಿನಲ್ಲಿ 6974 ರನ್ಗಳನ್ನು ಮತ್ತು ಟಿ-೨೦ಯಲ್ಲಿ 2364 ರನ್ಗಳನ್ನು ಗಳಿಸಿದ್ದಾರೆ.