30 ವರ್ಷದಿಂದ ಮತಗಟ್ಟೆಯಲ್ಲಿ ಮೊದಲ ಮತ ಹಾಕುವ ‘ಮಿಟ್ಟು ಚಂಗಪ್ಪ’

ಹೊಸದಿಗಂತ ವರದಿ ಮಡಿಕೇರಿ:

ಮಡಿಕೇರಿಯ ನಿವಾಸಿ, ಉದ್ಯಮಿ ಮಿಟ್ಟು ಚಂಗಪ್ಪ 30ನೇ ಬಾರಿಗೆ ಮೊದಲ‌ ಮತದಾರನಾಗಿ ಮತ ಚಲಾಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.ನಗರದ ಸಂತ ಮೈಕೆಲರ ಶಾಲೆಯ ಮತಗಟ್ಟೆಯಲ್ಲಿ ತಮ್ಮ 30ನೆಯ ಮೊದಲ ಮತವನ್ನು ಚಲಾಯಿಸುವುದರೊಂದಿಗೆ ಯುವಕರಿಗೂ ಮಾದರಿಯಾದರು.

1962ರಲ್ಲಿ ಮೊದಲ ಮತ ಚಲಾಯಿಸಿದ್ದ ಮಿಟ್ಟು ಚಂಗಪ್ಪ ನಂತರ ಸತತ 30 ಚುನಾವಣೆಯಲ್ಲೂ ಮತಗಟ್ಟೆಯಲ್ಲಿ ಮೊದಲ ಮತದಾರರಾಗಿ ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷ.
ಬುಧವಾರ ಕೂಡಾ ಬೆಳಗ್ಗೆ 6:30ಕ್ಕೇ ಮತಗಟ್ಟೆ ಬಳಿ ಬಂದು 7 ಗಂಟೆಗೆ ಮತ ಕೇಂದ್ರ ತೆರೆಯುತ್ತಿದ್ದಂತೆ ತಮ್ಮ ಮತವನ್ನು ಪತ್ನಿಯೊಂದಿಗೆ ಚಲಾಯಿಸಿ ಸಂಭ್ರಮ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಕೂಡಾ ಮತ ಚಲಾಯಿಸಬೇಕು. ಅದು ಪ್ರತಿ ಭಾರತೀಯನ ಅಮೂಲ್ಯ ಹಕ್ಕು ಎಂದು ಮಿಟ್ಟು ಪ್ರತಿಪಾದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!