Monday, July 4, 2022

Latest Posts

ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟ ಎಂ.ಕೆ.ಸ್ಟಾಲಿನ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಎಂ.ಕೆ.ಸ್ಟಾಲಿನ್ ಅವರು ತಮ್ಮ ಕಚೇರಿಯಿಂದ ಐದು ನಿರ್ಣಾಯಕ ಕಡತಗಳಿಗೆ ಸಹಿ ಹಾಕಿದರು. ಈ ಮೂಲಕ ಸಿಎಂ ಆಗಿ ಪದಗ್ರಹಣ ಮಾಡಿದ ದಿನದಂದೇ ತಮಿಳುನಾಡಿನ ಜನತೆಯ ಖುಷಿ ಹೆಚ್ಚಿಸಿದ್ದಾರೆ.
ಕೋರೋನಾ ಚಿಕಿತ್ಸೆಯನ್ನು ಮುಖ್ಯಮಂತ್ರಿಗಳ ಆರೋಗ್ಯ ವಿಮಾ ಯೋಜನೆಯಡಿ ನೀಡುವುದು, ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಎಲ್ಲಾ ಚಿಕಿತ್ಸಾ ವೆಚ್ಚಗಳನ್ನು ಸರ್ಕಾರವು ಮರುಪಾವತಿ ಮಾಡುವುದು, ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಸಿಟಿ ಬಸ್‌ಗಳಲ್ಲಿ (ಸಾಮಾನ್ಯ ಸೇವೆ) ಉಚಿತ ಪ್ರಯಾಣವನ್ನು ಘೋಷಿಸಿದ್ದಾರೆ.
ಚುನಾವಣಾ ಅಭಿಯಾನದ ಸಮಯದಲ್ಲಿ ಭರವಸೆ ನೀಡಿದಂತೆ ಪ್ರತಿ ಪಡಿತರ ಚೀಟಿದಾರರಿಗೆ 4,000 ರೂ.ಗಳ ಕೋವಿಡ್​ ಪರಿಹಾರವನ್ನು ವಿತರಿಸಲಾಗುವುದು. ಕೊರೋನಾ ಪರಿಹಾರವಾಗಿ ಮೊದಲ ಕಂತು 2,000 ರೂ. ಮೇ ತಿಂಗಳಲ್ಲಿ ನೀಡಲಾಗುವುದು ಎಂದು ನೂತನ ಸಿಎಂ ಘೋಷಿಸಿದ್ದಾರೆ.
ಸರ್ಕಾರಿ ಹಾಲಿನ ಸಹಕಾರಿ ಸಂಘವಾದ ಆವಿನ್, ಹಾಲಿನ ಬೆಲೆಯನ್ನು ಲೀಟರ್‌ಗೆ 3 ರೂ.ಗಳಷ್ಟು ಕಡಿಮೆ ಮಾಡಿದ್ದು, ಇದು ಮೇ 16 ರಿಂದ ಜಾರಿಗೆ ಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss