ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಬಾಗಲಕೋಟೆ:
ಜಿಲ್ಲಾ ಆಸ್ಪತ್ರೆಗಳಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆ ಗಮನಕ್ಕೆ ಬರುತ್ತಿದ್ದಂತೆ ಶಾಸಕ ವೀರಣ್ಣ ಚರಂತಿಮಠ ಅವರು ಸ್ವತಃ ಆಕ್ಸಿಜನ್ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ ಪೂರೈಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸಾರ್ ಅವರೊಂದಿಗೆ ಶಾಸಕರು ಆಕ್ಸಿಜನ್ ಮಾರಾಟ ಕೇಂದ್ರಕ್ಕೆ ಭೇಟಿನೀಡಿ, ಅಲ್ಲಿರುವ ಆಕ್ಸಿಜನ್ ಲಭ್ಯತೆ ಪರಿಶೀಲಿಸಿದರು.
ಬಾದಾಮಿ ರಸ್ತೆಯಲ್ಲಿರುವ ಆಕ್ಸಿಜನ್ ಕೇಂದ್ರದಲ್ಲಿ 15 ಟನ್ ಆಕ್ಸಿಜನ್ ಪೈಕಿ 3 ಟನ್ ಆಕ್ಸಿಜನ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲು ಆಕ್ಸಿಜನ್ ಮಾರಾಟ ಕೇಂದ್ರದ ಮಾಲೀಕರಿಗೆ ಶಾಸಕರು ಸೂಚಿಸಿದರು.
ಬೇಡಿಕೆ ತಕ್ಕಷ್ಟು ಲಭ್ಯವಿರುವ ಆಕ್ಸಿಜನ್ ನೋಡಿಕೊಂಡು ಪೂರೈಸಲಾಗುವುದು ಎಂದು ಮಾಲೀಕಶಾಸಕರಿಗೆ ಅಧಿಕಾರಿಗಳಿಗೆ ತಿಳಿಸಿದರು.