Thursday, August 11, 2022

Latest Posts

ಎರಡನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ: ಲಸಿಕೆ ಪಡೆದ ಶಾಸಕ ಕೆ. ಜಿ. ಬೋಪಯ್ಯ

ಹೊಸದಿಗಂತ ವರದಿ, ಕೊಡಗು:
ಸೋಮವಾರದಿಂದ ಆರಂಭವಾಗಿರುವ ಹಿರಿಯ ನಾಗರಿಕರಿಗೆ ನೀಡುವ ಮೊದಲ ಹಂತದ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಸ್ವತಃ ಲಸಿಕೆ ಪಡೆಯುವ ಮೂಲಕ ಶಾಸಕ ಕೆ.ಜಿ. ಬೋಪ್ಪಯ್ಯ ಅವರು ಚಾಲನೆ ನೀಡಿದರು.
ವೀರಾಜಪೇಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷ ಅಧಿಕಾರಿಗಳಾದ ನಿಷಾದಾ ಹಾಗೂ ಚಂದ್ರಕಲಾ ಅವರು ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಲಸಿಕೆ ಹಾಕಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿ.ಪಂ ಸದಸ್ಯರಾದ ಶಶಿ ಸುಬ್ರಮಣಿ, ಅಪ್ಪಡೇರಂಡ ಭವ್ಯಾ, ವೈದ್ಯಾಧಿಕಾರಿ ಸಿಂಪಿ ಸೇರಿದಂತೆ ಹಲವರು ಹಾಜರಿದ್ದರು.
ಎರಡನೇ ಹಂತದ ಅಭಿಯಾನದಲ್ಲಿ 60 ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಅನ್ಯವಾಧಿಯಿಂದ ಬಳುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ಕೊರೋನಾ ವಿರುದ್ಧ ದೇಶ ವಿಜಯ ಸಾಧಿಸುವ ವಿಶ್ವಾಸ ಜನತೆಯಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss