ಶಾಸಕರ ನೇತೃತ್ವದಲ್ಲಿ ಕಾರ್ಯಾಚರಣೆ: ಕಸಾಯಿಖಾನೆಗೆ ಸಾಗಿಸಲು ಕಟ್ಟಿಹಾಕಿದ್ದ 40 ಗೋವುಗಳ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಬಸ್ ನಿಲ್ದಾಣ ಬಳಿಯ ಮೆಹಬೂಬ್ ನಗರದಲ್ಲಿಯ ಖಾಸಗಿ ಜಾಗದಲ್ಲಿ ಕಸಾಯಿಖಾನೆಗೆ ಸಾಗಿಸಲು ಕಟ್ಟಿಹಾಕಿದ್ದ 40 ಗೋವುಗಳನ್ನು ಶಾಸಕ ಶರಣು ಸಲಗಾರ್ ಶುಕ್ರವಾರ ದಾಳಿ ನಡೆಸಿ ರಕ್ಷಿಸಿದ್ದಾರೆ.
ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಗೊವುಗಳಿರುವ ಸ್ಥಳಕ್ಕೆ ದಾಳಿ ನಡೆಸಿದಾಗ ಕರುಗಳ ಸಹಿತ 40 ಗೋವುಗಳಿದ್ದವು. ನಂತರ ಬಸವಕಲ್ಯಾಣ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶಾಸಕ ಶರಣು ಸಲಗಾರ್ ಮನವಿ ಮೆರೆಗೆ ಪ್ರಕರಣ ದಾಖಲಿಸಿ ತಪ್ಪಿತಸ್ಥರ ಪತ್ತೇ ಹಚ್ಚುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!