ಕರ್ತವ್ಯ ಮರೆಯದ ಶಾಸಕಿ: ಎರಡೂವರೆ ತಿಂಗಳ ಮಗು ಎತ್ತಿಕೊಂಡೇ ಅಧಿವೇಶನಕ್ಕೆ ಬಂದ ಸರೋಜ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುತ್ತಿರುವ ವಿಧಾನಮಂಡಳದ ಅಧಿವೇಶನದ ಮೊದಲ ದಿನ ಅಚ್ಚರಿಯ ಸಂಗತಿ ನಡೆದಿದೆ.

ಎನ್‌ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ತನ್ನ ಎರಡೂವರೆ ತಿಂಗಳು ಹಸುಗೂಸಿನೊಂದಿಗೆ ಅಧಿವೇಶನಕ್ಕೆ ಹಾಜರಾಗಿದ್ದು, ಎಲ್ಲರ ಗಮನಸೆಳೆದಿದೆ.

ಎನ್‌ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ಸೆ.30ರಂದು ಮಗುವಿಗೆ ಜನ್ಮ ನೀಡಿದ್ದರು.ಇಂದಿನಿಂದ(ಸೋಮವಾರ) ಅಧಿವೇಶನ ಶುರುವಾಗಿದ್ದು, ಹೀಗಾಗಿ ಪುಟ್ಟ ಮಗುವಿನ ಜತೆ ಆಗಮಿಸುವ ಮೂಲಕ ಗಮನ ಸೆಳದರು.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕಿ, ಕೊರೋನಾ ಹಿನ್ನೆಲೆ ಕಳೆದ ಎರಡೂವರೆ ವರ್ಷಗಳಿಂದ ನಾಗ್ಪುರದಲ್ಲಿ ಯಾವುದೇ ಅಧಿವೇಶನ ನಡೆದಿರಲಿಲ್ಲ. ನಾನೀಗ ತಾಯಿಯಾಗಿದ್ದೇನೆ. ಆದರೆ ನನ್ನ ಮತದಾರರಿಗೆ ಉತ್ತರ ಕೊಡಲು ಬಂದಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!