ಎಂಎಂಟಿಎಸ್ ರೈಲಿನಲ್ಲಿ ಭಾರೀ ಶಬ್ಧ: ಎದ್ನೋ ಬಿದ್ನೋ ಅಂತ ಓಡಿದ ಪ್ರಯಾಣಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಯಾಣದ ವೇಳೆ MMTS ರೈಲಿನಿಂದ ಭಾರಿ ಸದ್ದು ಕೇಳಿ ಬಂದಿದ್ದು, ಇದ್ದಕ್ಕಿದ್ದಂತೆ ರೈಲು ಹಳಿ ಮೇಲೆ ನಿಂತ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬಾರೀ ಶಬ್ದ ಕೇಳಿ ಗಾಬರಿಗೊಂಡ ಪ್ರಯಾಣಿಕರು ರೈಲಿನಿಂದ ಇಳಿದು ಎದ್ನೋ ಬಿದ್ನೋ ಅಂತ ಓಡಿದ್ದಾರೆ.

MMTS ರೈಲು ಬೆಗಂಪೇಟೆ- ನೆಕ್ಲೇಸ್ ರಸ್ತೆ ನಿಲ್ದಾಣಗಳ ನಡುವೆ ನಿಂತುಹೋಗಿದೆ. ಲಿಂಗಂಪಲ್ಲಿಯಿಂದ ಬರುತ್ತಿದ್ದ ರೈಲು ತಾಂತ್ರಿಕ ತೊಂದರೆಯಿಂದ ನಿಲುಗಡೆಯಾಗಿದೆ ಎಂದು ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ.  ಆದರೆ, ರೈಲಿನಿಂದ ಭಾರೀ ಶಬ್ದ ಕೇಳಿ ಬಂದಿದ್ದರಿಂದ ಪ್ರಯಾಣಿಕರು ಭಯಭೀತರಾಗಿ ರೈಲಿನಿಂದ ಹೊರ ಓಡಿ ಬಂದಿದ್ದಾರೆ.

ಆ ರೈಲಿನಲ್ಲಿ ಕಚೇರಿ, ಕಾಲೇಜುಗಳಿಗೆ ತೆರಳುವವರ ಸಂಖ್ಯೆಯೇ ಹೆಚ್ಚಾಗಿದ್ದು, ಹಠಾತ್‌ ರೈಲು ನಿಂತಿದ್ದರಿಂದ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪ್ರಯಾಣಿಕರು ಪರದಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!