ಮೊಬೈಲ್ ಗೇಮಿಂಗ್ ಆ್ಯಪ್​ ಹಗರಣ: ಉದ್ಯಮಿ ಅಮೀರ್ ಖಾನ್ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೊಬೈಲ್ ಗೇಮಿಂಗ್ ಆ್ಯಪ್​ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಉದ್ಯಮಿ ಅಮೀರ್ ಖಾನ್​ರನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ.

ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಹಗರಣ ಸಂಬಂಧ ಸೆಪ್ಟೆಂಬರ್ 10ರಂದು ಉದ್ಯಮಿ ಅಮೀರ್ ಖಾನ್ ಅವರ ಕೋಲ್ಕತ್ತಾ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದರು. ಈ ದಾಳಿ ವೇಳೆ 18 ಕೋಟಿ ರೂ. ನಗದು ಮನೆಯಲ್ಲಿ ಪತ್ತೆಯಾಗಿತ್ತು. ಇಡಿ ದಾಳಿ ನಡೆಸಿದ ನಂತರ ಅಮೀರ್ ಖಾನ್ ಪರಾರಿಯಾಗಿದ್ದರು.

ಇದೀಗ ಗಾಜಿಯಾಬಾದ್‌ನಲ್ಲಿ ಅಮೀರ್ ಖಾನ್ ತಲೆ ಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಕೋಲ್ಕತ್ತಾ ಗುಪ್ತಚರ ಇಲಾಖೆಯ ತಂಡ ಗಾಜಿಯಾಬಾದ್‌ಗೆ ತೆರಳಿ ಬಂಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!