ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಿಸುವುದೇ ಒಂದು ಅಪರಾಧ ಎಂದು ಉತ್ತರ ಪ್ರದೇಶದ ಮಹಿಳಾ ಆಯೋಗದ ಸದಸ್ಯೆಯೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ಇಂತದ್ದೊಂದು ಹೇಳಿಕೆ ನೀಡಿದ್ದು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎನ್ನುತ್ತಾರೆ. ಈಗಿನ್ನೂ ಹದಿಹರೆಯಕ್ಕೆ ಬರುತ್ತಿರುವ ಹೆಣ್ಣು ಮಕ್ಕಳು ಏನು ಮಾಡುತ್ತಾರೆ ಎನ್ನುವುದನ್ನು ಅವರ ತಂದೆ ತಾಯಿ ಹೊರಬಂದು ನೋಡಬೇಕು. ಹೆಣ್ಣು ಮಕ್ಕಳ ಕೈಗೆ ಮೊಬೈಲ್ ಕೊಡುವುದೇ ಅಪರಾಧ. ಅದರಿಂದ ಮುಂದೆ ರೇಪ್ ಆಗುವ ಸಂಭವವೂ ಇರುತ್ತದೆ. ಹಾಗೆಯೇ ಅವರ ಮೊಬೈಲ್ನ್ನು ತಂದೆ ತಾಯಿ ಚೆಕ್ ಮಾಡುತ್ತಿರಬೇಕು. ಹೆಣ್ಣು ಮಕ್ಕಳು ಹೊರ ಬಂದು, ಯಾರ್ಯಾರದ್ದೋ ಜತೆ ಸಂಪರ್ಕ ಬೆಳೆಸಿ ಕಷ್ಟಕ್ಕೆ ಸಿಲುಕುತ್ತಾರೆ. ಇದನ್ನೆಲ್ಲ ತಾಯಿ ಆದವರು ಗಮನಿಸುತ್ತಿರಬೇಕು ಎಂದು ಮೀನಾ ಕುಮಾರಿ ಹೇಳಿದ್ದಾರೆ.
ಈ ಹೇಳಿಕೆ ಆಕ್ರೋಶಕ್ಕೂ ಕಾರಣವಾಗಿದ್ದು, ಆದರೆ ಹೇಳಿಕೆಯನ್ನು ಹಿಂಪಡೆಯದ ಮೀರಾ ಕುಮಾರಿ, ನಾನು ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಹೆಣ್ಣಾಗಲೀ ಗಂಡಾಗಲೀ.. ಇನ್ನೂ ಜವಾಬ್ದಾರಿ ಬಾರದ ವಯಸ್ಸಿನಲ್ಲಿ ಮೊಬೈಲ್ ಬಳಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಇಂತಹ ಅನೇಕ ಸಮಸ್ಯೆಗಳು ಆಗುತ್ತಿದೆ ಎಂದು ಹೇಳಿದ್ದಾರೆ.