ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಜನ ತಮ್ಮ ಮೊಬೈಲ್ ಪೌಚ್ ಅಥವಾ ಕವರ್ ಹಿಂದೆ ನೋಟುಗಳನ್ನು ಇಡುವುದು ರೂಢಿ ಮಾಡಿಕೊಂಡಿದ್ದಾರೆ. ಇದಲ್ಲದೆ ಕೆಲವೊಮ್ಮೆ ಎಟಿಎಂ ಕಾರ್ಡ್‌ಗಳು ಮತ್ತು ಇತರ ದಪ್ಪ ಕಾಗದಗಳನ್ನು ಸಹ ಇರಿಸಲಾಗುತ್ತದೆ. ಹೀಗೆ ಮಾಡುವುದರಿಂದ ನೀವೂ, ನಿಮ್ಮ ಮೊಬೈಲ್ ಫೋನ್ ಎರಡಕ್ಕೂ ಅಪಾಯ ಹೆಚ್ಚು.
ಸಾಧ್ಯವಾದಷ್ಟು ಫೋನ್ ಕವರ್‌ನಲ್ಲಿ ಹಣ, ರೀತಿಯ ಕಾಗದವನ್ನು ಇಟ್ಟುಕೊಳ್ಳುವುದನ್ನು ತಪ್ಪಿಸಿ. ಮೊಬೈಲ್ ಫೋನ್ ಹೆಚ್ಚಾಗಿ ಬಳಸುವುದರಿಂದ ಬಿಸಿಯಾಗುವುದು ನೋಡಿದ್ದೀರಿ. ಫೋನ್ ಕವರ್‌ನಲ್ಲಿ ಇರಿಸಲಾದ ಹಣ, ಕಾಗದ ಅದನ್ನು ತಣ್ಣಗಾಗಲು ಬಿಡುವುದಿಲ್ಲ. ಈ ಕಾರಣದಿಂದಾಗಿ ಹೆಚ್ಚಿನಸ್ಪೋಟದ ಪ್ರಕರಣಗಳು ದಾಖಲಾಗಿವೆ. ಇದು ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆಗಳಿಗೂ ಕಾರಣವಾಗಬಹುದು.
ಚಾರ್ಜ್ ಮಾಡುವಾಗ ಫೋನ್ ಬಳಸುವುದು ಕೂಡ ಫೋನ್ ಸ್ಫೋಟಗೊಳ್ಳಲು ಕಾರಣವಾಗಬಹುದು. ನೀವು ಫೋನ್ ಕವರ್‌ನಲ್ಲಿ ಹಣವನ್ನು ಹಾಕಿದರೆ ಅದು ನಿಮಗೆ ಬಹಳಷ್ಟು ನಷ್ಟವನ್ನು ಉಂಟುಮಾಡುತ್ತದೆ. ಫೋನ್ ಸ್ಫೋಟಗೊಂಡರೆ, ಅದರೊಂದಿಗೆ ನಿಮ್ಮ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ.