ಜಮ್ಮು ಕಾಶ್ಮೀರದಲ್ಲಿ ಪ್ರಬಲ ಭೂಕಂಪ; ರಿಕ್ಟರ್‌ ಮಾಪಕದಲ್ಲಿ 5ರಷ್ಟು ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5 ರಷ್ಟು ದಾಖಲಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಆಗಿರುವ ಕುರಿತಾಗಿ ವರದಿಯಾಗಿಲ್ಲ.
ಬೆಳಿಗ್ಗೆ 5.35 ಕ್ಕೆ ಭೂಮಿ ಕಂಪಿಸಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರಬಿಂದು ತಜಕಿಸ್ತಾನದ ಗೊರ್ನೊ-ಬದಕ್ಷನ್ ಪ್ರದೇಶದಲ್ಲಿತ್ತು. ಭೂಮಿಯ ಅಂತರಾಳದಲ್ಲಿ ೧೦೮ ಕಿಮೀ ಆಳದೊಳಗೆ ಭೂಕಂಪನದ ಕೇಂದ್ರಬಿಂದುವಿತ್ತು ಎಂದು ಅಧಿಕಾರಿಗಳು ತಿಳಿಸಿದ್ಧಾರೆ. ಜಮ್ಮುಕಾಶ್ಮೀರದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವಗಳಾಗಿದೆ.
ಕಾಶ್ಮೀರವು ಈ ಹಿಂದೆ ಭೂಕಂಪನದಿಂದ ಸಾಕಷ್ಟು ಸಾವು ನೋವುಗಳನ್ನು ಕಂಡಿದೆ. ಅಕ್ಟೋಬರ್ 8, 2005 ರಂದು ಸಂಭವಿಸಿದ ಭೂಕಂಪದಿಂದ ನಿಯಂತ್ರಣ ರೇಖೆಯ (ಎಲ್‌ಒಸಿ) ಎರಡು ಬದಿಗಳಲ್ಲಿ 80,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆಗ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6 ರಷ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!