ಮೋದಿ ಹಾಗೆಯೇ ಯುವಕರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು: ಇನ್ಫೋಸಿಸ್ ನಾರಾಯಣ ಮೂರ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನ ಯುವ ಜನಾಂಗ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿಡ್ಡ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಈಗ ಮತ್ತೆ ಮತ್ತೆ ಮಾತನ್ನು ಪುನರುಚ್ಚರಿಸಿದ್ದಾರೆ.

ಇತ್ತೀಚೆಗೆ ನಡೆದ ಸಿಎನ್​​ಬಿಸಿ ಗ್ಲೋಬಲ್​​​ ಲೀಡರ್​ಶೀಪ್​​​ ಸಮ್ಮಿಟ್​​ನಲ್ಲಿ ಮಾತಾಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು, ನನ್ನನ್ನು ದಯವಿಟ್ಟು ಕ್ಷಮಿಸಿ. ಕೆಲಸದ ಅವಧಿ ಬಗ್ಗೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸತ್ತರೂ ದೇಶದ ಆರ್ಥಿಕ ಅಭಿವೃದ್ಧಿಗಾಗಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅನ್ನೋದನ್ನು ಮತ್ತೆ ಪ್ರತಿಪಾದಿಸುತ್ಥೇನೆ ಎಂದರು .

ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ. ಇವರು ದೇಶದ ಅಭಿವೃದ್ಧಿಗೆ ಮೂಲ ಪ್ರೇರಣೆ. ಮೋದಿ ಹಾಗೆಯೇ ಯುವಕರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು. ನಾನು ವೃತ್ತಿ ಜೀವನದ ಆರಂಭದಲ್ಲಿ ಪ್ರತಿದಿನ 14 ಗಂಟೆ ಕೆಲಸ ಮಾಡುತ್ತಿದ್ದೆ ಎಂದರು.

ಜಪಾನ್, ಜರ್ಮನಿ ರೀತಿಯ ದೇಶದಲ್ಲಿ ಜನ ವಾರಕ್ಕೆ 70 ಗಂಟೆ ಕೆಲಸ ಮಾಡುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ದೇಶ ಕಟ್ಟಿದ್ದಾರೆ. ಪ್ರತಿಭಾವಂತರು ದಿನಕ್ಕೆ ಕನಿಷ್ಠ 10 ಗಂಟೆ ಕೆಲಸ ಮಾಡಲೇಬೇಕು. ಆಗ ನಮ್ಮ ದೇಶ ಅಭಿವೃದ್ಧಿ ಆಗುತ್ತದೆ ಎಂದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!