ಮೋದಿ ಜನ್ಮದಿನ: ʼಭಾರತದ ಸಾಂಸ್ಕೃತಿಕ ಶಕ್ತಿಯ ರಾಯಭಾರಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿ ವರ್ಚಸ್ವಿ ಜಾಗತಿಕ ನಾಯಕರಾಗಿ ಹೊರಹೊಮ್ಮಿರುವುದಂತೂ ಕಣ್ಣೆದುರಿನ ಸತ್ಯ. ಈ ವರ್ಚಸ್ಸನ್ನು ಅವರು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರದರ್ಶನಕ್ಕೆ ಬಳಸೂತ್ತಿರುವುದೂ ಅಷ್ಟೇ ಸತ್ಯ. ಯೋಗ ಮತ್ತು ಭಾರತದ ಪಾರಂಪರಿಕ ವೈದ್ಯವನ್ನು ಜಗತ್ತಿನೆದುರು ದೊಡ್ಡ ಮಟ್ಟದಲ್ಲಿ ಬ್ರಾಂಡ್ ಮಾಡುತ್ತಿರುವುದು ಒಂದೆಡೆ. ತಾವು ಭೇಟಿಯಾದ ವಿಶ್ವನಾಯಕರಿಗೆ ಪ್ರಧಾನಿ ಮೋದಿ ಹೆಚ್ಚಿನ ಸಂದರ್ಭಗಳಲ್ಲಿ ಉಡುಗೊರೆ ಕೊಡುವುದು ನಮ್ಮ ದೇಶದ ಕರಕುಶಲ ವಸ್ತುಗಳನ್ನು. ಅಂತೆಯೇ, ವಿಶ್ವನಾಯಕರಿಗೆ ಕೇವಲ ತಾಜ್ ಮಹಲ್ ಮಾತ್ರವೇ ತೋರಿಸುವ ಪದ್ಧತಿಯಿಂದ ಹೊರಬಂದು, ಅಹಮದಾಬಾದ್ ಮತ್ತು ತಮಿಳುನಾಡುಗಳಲ್ಲಿ ಪ್ರಮುಖ ಭೇಟಿಗಳನ್ನು ಯೋಜಿಸಿ ಅಲ್ಲಿನ ಐತಿಹಾಸಿಕ ಹಿರಿಮೆಗಳನ್ನೂ ಪರಿಚಯಿಸಿದವರು ಮೋದಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!