ಮೋದಿ ಹುಟ್ಟುಹಬ್ಬದ ಸಂಭ್ರಮ: ಚನ್ನಪಟ್ಟಣದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಬಿಜೆಪಿ ಜಿಲ್ಲಾಧ್ಯಕ್ಷ

ಹೊಸದಿಗಂತ ವರದಿ ರಾಮನಗರ : ಚನ್ನಪಟ್ಟಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಬಿಜೆಪಿ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು. ಪಟ್ಟಣದ ಕೊಲ್ಲಾಪುರದಮ್ಮನವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಅಧ್ಯಕ್ಷ ಎಂ.ಎನ್. ಆನಂದಸ್ವಾಮಿ ಅವರು ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡಿದರು. ಎಲ್ಲರನ್ನೂ ಕುರ್ಚಿಯಲ್ಲಿ ಸಾಲಾಗಿ ಕೂರಿಸಿ ಪ್ರತಿಯೊಬ್ಬರ ಪಾದಗಳಿಗೆ ಆನಂದಸ್ವಾಮಿ ಅವರು ನೀರು ಹಾಕಿ ತೊಳೆಯಲು ಮುಂದಾದಾಗ ಬಹುತೇಕ ಮಹಿಳೆಯರು ಅಂಜಿಕೊಂಡರು. ಕಾಲು ಹಿಂದಕ್ಕೆ ಎಳೆದುಕೊಂಡು ‘ಇರಲಿ ಬಿಡಣ್ಣಾ…’ ಎಂದು ಸಂಕೋಚ ವ್ಯಕ್ತಪಡಿಸಿದರು. ಅದಕ್ಕೆ ಆನಂದಸ್ವಾಮಿ, … Continue reading ಮೋದಿ ಹುಟ್ಟುಹಬ್ಬದ ಸಂಭ್ರಮ: ಚನ್ನಪಟ್ಟಣದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಬಿಜೆಪಿ ಜಿಲ್ಲಾಧ್ಯಕ್ಷ