ಜಿ-20ಯಲ್ಲಿ ಮೋದಿ ಸಿರಿಧಾನ್ಯ ಸಂದೇಶ, ಜಾಗತಿಕ ಆಹಾರ ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ 17 ನೇ ಆವೃತ್ತಿಯ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಪ್ರಸ್ತುತ ಜಗತ್ತಿನಲ್ಲಿ ತಲೆದೂರುತ್ತಿರುವ ಆಹಾರ ಬಿಕ್ಕಟ್ಟಿನ ಕುರಿತು ಜಗತ್ತು ಗಮನಹರಿಸಬೇಕಿದೆ ಜೊತೆಗೆ ನಾಗರಿಕರ ಅಪೌಷ್ಟಿಕತೆ, ಹಸಿವನ್ನು ಹೋಗಲಾಡಿಸಲು ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಬೇಕಿದೆ ಎಂಬ ಸಂದೇಶ ನೀಡಿದ್ದಾರೆ.

ಪ್ರಸ್ತುತ ಜಾಗತಿಕವಾಗಿ ಆಹಾರ ಬಿಕ್ಕಟ್ಟಿನ ಸಮಸ್ಯೆ ಕಾಡುತ್ತಿದೆ. ಅಲ್ಲದೇ ರಸಗೊಬ್ಬರಗಳಿಗೆ ಸಂಬಂಧಿಸಿದಂತೆಯೂ ಸಮಸ್ಯೆಗಳು ಎದುರಾಗಿದ್ದು ಇದನ್ನು ಭದ್ರಪಡಿಸಲು ಪೂರೈಕೆ ಸರಪಳಿಯನ್ನು ಭದ್ರಪಡಿಸುವ ಅವಶ್ಯಕತೆಯಿದೆ ಎಂದಿದ್ದಾರೆ. ಈ ಕುರಿತು ಭಾರತವು ತನ್ನ 1.3 ಶತಕೋಟಿ ನಾಗರಿಕರ ಆಹಾರ ಭದ್ರತೆಯನ್ನು ಹೇಗೆ ಖಾತ್ರಿಪಡಿಸಿದೆ ಎಂಬುದನ್ನು ಉಲ್ಲೇಖಿಸಿದ ಅವರು ಸಾಂಕ್ರಾಮಿಕ ಸಮಯದಲ್ಲಿ ಅಗತ್ಯವಿರುವ ಅನೇಕ ದೇಶಗಳಿಗೂ ಸರಬರಾಜು ಮಾಡಲಾಗಿದೆ ಎಂದು ಹೇಳಿದ್ದಾರೆ.

ಆಹಾರ ಭದ್ರತೆಯ ವಿಷಯದಲ್ಲಿ ಪ್ರಸ್ತುತ ರಸಗೊಬ್ಬರಗಳ ಕೊರತೆಯನ್ನು ದೊಡ್ಡ ಬಿಕ್ಕಟ್ಟು ಎಂದು ಕರೆದ ಅವರು “ಇಂದಿನ ರಸಗೊಬ್ಬರ ಕೊರತೆ ನಾಳಿನ ಆಹಾರ ಬಿಕ್ಕಟ್ಟಾಗಿ ಪರಿಣಮಿಸಬಹುದು. ಆದ್ದರಿಂದ ಗೊಬ್ಬರ ಮತ್ತು ಆಹಾರ ಧಾನ್ಯಗಳ ಸ್ಥಿರ ಮತ್ತು ಖಚಿತವಾದ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳಲು ನಾವು ಪರಸ್ಪರ ಒಪ್ಪಂದವನ್ನು ನಿರ್ಮಿಸಬೇಕು” ಎಂದಿದ್ದಾರೆ.

“ಭಾರತದಲ್ಲಿ, ಸುಸ್ಥಿರ ಆಹಾರ ಭದ್ರತೆಗಾಗಿ, ನಾವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ ಮತ್ತು ಸಿರಿಧಾನ್ಯಗಳಂತಹ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಮರು-ಜನಪ್ರಿಯಗೊಳಿಸುತ್ತಿದ್ದೇವೆ. ಸಿರಿಧಾನ್ಯಗಳು ಜಾಗತಿಕವಾಗಿ ಅಪೌಷ್ಟಿಕತೆ ಮತ್ತು ಹಸಿವನ್ನು ಪರಿಹರಿಸಬಲ್ಲವು. ಮುಂದಿನ ವರ್ಷ ನಾವೆಲ್ಲರೂ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಅತ್ಯಂತ ಉತ್ಸಾಹದಿಂದ ಆಚರಿಸಬೇಕು, ”ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!