ಜನರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರಕಾರ: ಸರ್ಕಾರದ ಯೋಜನೆಗಳಡಿ ಸಾರವರ್ಧಿತ ಅಕ್ಕಿ ವಿತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(ಎನ್‌.ಎಫ್‌.ಎಸ್‌.ಎ.) ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐ.ಸಿ.ಡಿ.ಎಸ್.) ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಅಡಿಯಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ(ಟಿಪಿಡಿಎಸ್)ಯಡಿ ಸಾರವರ್ಧಿತ (ಫೋರ್ಟಿಫೈಡ್ ) ಅಕ್ಕಿಯನ್ನು ವಿತರಿಸುವ ಪ್ರಸ್ತಾವನೆಗೆಕೇಂದ್ರ ಸಂಪುಟ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ.
2024 ರ ವೇಳೆಗೆ ಹಂತ ಹಂತವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರದ ನಿರ್ಮಾಣ-PM ಪೋಶನ್ (ಹಿಂದಿನ ಮಧ್ಯಾಹ್ನದ ಊಟ ಯೋಜನೆ (MDM)) ಮತ್ತು ಇತರ ಕಲ್ಯಾಣ ಯೋಜನೆಗಳಡಿ ಅಕ್ಕಿ ವಿತರಿಸಲಾಗುವುದು.
ಸಂಪುಟದ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಭಾರತೀಯ ಆಹಾರ ನಿಗಮ(ಎಫ್‌.ಸಿ.ಐ.) ಮತ್ತು ರಾಜ್ಯ ಏಜೆನ್ಸಿಗಳು ಈಗಾಗಲೇ ವಿತರಣೆ ಮತ್ತು ಪೂರೈಕೆಗಾಗಿ 88.65 ಲಕ್ಷ ಮೆಟ್ರಿಕ್ ಟನ್(ಎಲ್‌.ಎಂ.ಟಿ.) ಅಕ್ಕಿಯನ್ನು ಸಂಗ್ರಹಿಸಿವೆ. ಆಗಸ್ಟ್ 15, 2021 ರಂದು ಪ್ರಧಾನಿ ಮೋದಿ ಅವರು ಈ ಬಗ್ಗೆ ಘೋಷಿಸಿದ್ದರು.
ಸಂಪೂರ್ಣ ವೆಚ್ಚವನ್ನು(ವರ್ಷಕ್ಕೆ 2,700 ಕೋಟಿ ರೂ.) ಸರ್ಕಾರ ಭರಿಸಲಿದ್ದು, 2024 ರ ಜೂನ್ ವರೆಗೆ ಸಂಪೂರ್ಣ ಅನುಷ್ಠಾನಗೊಳಿಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!