ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಕೇಂದ್ರ ಸಚಿವ ಸಂಪುಟ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ಅನುಮೋದನೆ ಮಾಡಿದೆ.
ಇದೀಗ ಮೂಲಗಳ ಪ್ರಕಾರ, ನಾಳೆ (ಮಂಗಳವಾರ) ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಲೋಕಸಭೆ ಅಧಿವೇಶನದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸಲಿದ್ದಾರೆ.
ಸರ್ಕಾರವು ಈಗಾಗಲೇ ಮಸೂದೆಯ ಪ್ರತಿಗಳನ್ನು ಸಂಸದರಿಗೆ ನೀಡಿದೆ. ಅದನ್ನು ಅಧ್ಯಯನ ಮಾಡಿ ಅವರು ಅಧಿವೇಶನಕ್ಕೆ ಆಗಮಿಸಬಹುದು.
ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 20 ರಂದು ಕೊನೆಗೊಳ್ಳುತ್ತಿದೆ. ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ಈ ಅಧಿವೇಶನದಲ್ಲಿ ಮಂಡಿಸಲು ಸರ್ಕಾರಕ್ಕೆ ಕೇವಲ 4 ದಿನಗಳು ಉಳಿದಿವೆ.
ಕೇಂದ್ರ ಸಚಿವ ಸಂಪುಟವು ಡಿಸೆಂಬರ್ 12ರಂದು ಮಹತ್ವದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಅನುಮೋದನೆ ನೀಡಿದ್ದು, ಇದು ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ .
ಮೂಲಗಳ ಪ್ರಕಾರ, ಸಂಪುಟದ ಅನುಮೋದನೆಯು ಪ್ರಸ್ತುತ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡಲಿದೆ.