ಮೋದಿ ಉದ್ಘಾಟಿಸಿದ ಪ್ರಧಾನಿಗಳ ಮ್ಯೂಸಿಯಮ್: ಇದರಲ್ಲೇನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದರು. ದೆಹಲಿಯ ತೀನ್ ಮೂರ್ತಿ ಎಸ್ಟೇಟ್ ನಲ್ಲಿ ೨೧೭ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ ಭಾರತದ ೧೪ ಪ್ರಧಾನಿಗಳ ಕಾರ್ಯವೈಖರಿ ಮತ್ತು ಅವರ ಕೊಡುಗೆಗಳನ್ನು ವಿವರಿಸುವ ಹಲವು ಪ್ರದರ್ಶಿನಿಗಳನ್ನು ಒಳಗೊಂಡಿದೆ.

ಏನಿದೆ ಈ ಮ್ಯೂಸಿಯಂನಲ್ಲಿ?
ಪ್ರಥಮ ಪ್ರಧಾನಿ ನೆಹರುರವರಿಂದ ಇಲ್ಲಿಯವರೆಗೆ ದೇಶವನ್ನು ಮುನ್ನಡೆಸಿದ ೧೪ ಪ್ರಧಾನಿಗಳ ಕಾರ್ಯವೈಖರಿಯನ್ನು ವಿವರಿಸುವ ಸಂಗ್ರಹಿಸಿದ ಕೃತಿಗಳು ಮತ್ತು ಪ್ರಮುಖ ಪತ್ರವ್ಯವಹಾರಗಳು, ವೈಯಕ್ತಿಕ ವಸ್ತುಗಳು, ಉಡುಗೊರೆಗಳು ಮತ್ತು ಸ್ಮರಣಿಕೆಗಳು, ಭಾಷಣಗಳು ಮತ್ತು ವಿಚಾರಧಾರೆಗಳ ಉಪಾಖ್ಯಾನ ನಿರೂಪಣೆಗಳು ಮತ್ತು ವಿಷಯಾಧಾರಿತ ಸ್ವರೂಪದಲ್ಲಿ ವಿವಿಧ ಅಂಶಗಳನ್ನು ಒಳಗೊಂಡಿದೆ.

ಪ್ರದರ್ಶನಗಳಲ್ಲಿ ವರ್ಚುವಲ್ ರಿಯಾಲಿಟಿ, ಹೊಲೊಗ್ರಾಮ್‌ಗಳು, ಮಲ್ಟಿ-ಟಚ್, ಮಲ್ಟಿಮೀಡಿಯಾ, ಇಂಟರಾಕ್ಟಿವ್ ಕಿಯೋಸ್ಕ್‌ಗಳು, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು, ಕಂಪ್ಯೂಟರೀಕೃತ ಚಲನ ಶಿಲ್ಪಗಳು, ಸಂವಾದಾತ್ಮಕ ಪರದೆಗಳ ಮೂಲಕ ಹೊಸ ಅನುಭವ ನೀಡುವಂತೆ ಮ್ಯೂಸಿಯಂ ಅನ್ನು ರೂಪಿಸಲಾಗಿದೆ.

ಭಾರತದ ಸ್ವಾತಂತ್ರ್ಯ ಹೋರಾಟದಿಂದ ಪ್ರಾರಂಭವಾಗುವ ಈ ಮ್ಯೂಸಿಯಂ ಪ್ರದರ್ಶನವು ಮುಂದುವರೆದು ಸಂವಿಧಾನ ರಚನೆ ಹಾಗೂ ದೇಶದ ಪ್ರಧಾನಿಗಳು ದೇಶಕ್ಕೆದುರಾದ ಸವಾಲುಗಳನ್ನು ಎದುರಿಸಿ ದೇಶವನ್ನು ಮುನ್ನಡೆಸಿದ ರೀತಿಗಳ ಕುರಿತಾಗಿ ಪ್ರದರ್ಶನ ನೀಡುತ್ತದೆ.ಜೊತೆಗೆ ಮುಂದಿನ ದಿನಗಳಲ್ಲಿ ಪ್ರಧಾನಿಯಾಗುವವರಿಗೂ ಪ್ರಧಾನಿಮಂತ್ರಿ ಸಂಗ್ರಹಾಲಯದಲ್ಲಿ ಸ್ಥಾನ ಮೀಸಲಿಟ್ಟಿರುವುದು ವಿಶೇಷ.

ಮ್ಯೂಸಿಯಂನ ವಿಶೇಷತೆ
ಯಾವುದೇ ಮರಗಳನ್ನು ಕಡಿಯದೇ ಉದಯೋನ್ಮುಖ ಭಾರತದ ಕಥೆಯನ್ನು ಪ್ರತಿಬಿಂಬಿಸಲು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದ್ದು ಸುಸ್ಥಿರ ಶಕ್ತಿಸಂರಕ್ಷಣಾ ವಿಧಾನಗಳನ್ನು ಒಳಗೊಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!