Thursday, August 18, 2022

Latest Posts

ಮೋದಿ ಈ ನೆಲದ ವ್ಯಕ್ತಿ: ಪ್ರಧಾನಿ ಅವರನ್ನು ಹಾಡಿ ಹೊಗಳಿದ ಗುಲಾಂ ನಬಿ ಆಜಾದ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದ ಪ್ರಧಾನಿಯಾದರು ಕೂಡ ನರೇಂದ್ರ ಮೋದಿ ಅವರು ತಮ್ಮ ಬೇರಿನ ಮೂಲವನ್ನು ಮರೆತಿಲ್ಲ. ಒಮ್ಮೆಯಿಂದ ತಮ್ಮನ್ನು ಚಾಯ್​ ವಾಲಾ ಎಂದು ಕರೆದುಕೊಂಡಿದ್ದಾರೆ ಎಂದು ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಅವರು ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.
ಜಮ್ಮುವಿನಲ್ಲಿ ನಡೆದ ಗುಜ್ಜರ್​​ ಸಮುದಾಯದ ಸಭೆಯನ್ನು ಉದ್ದೇಶಿಸಿ ಆಜಾದ್​ ಮಾತನಾಡಿದ್ದು, ಜನರು ಮೋದಿ ಅವರನ್ನು ನೋಡಿ ಕಲಿಯಬೇಕಿದೆ. ಅವರು ಪ್ರಧಾನಿಯದ ಮೇಲೂ ತಮ್ಮನ್ನು ಹೆಮ್ಮೆಯಿಂದ ಚಾಯ್ ವಾಲಾ ಎಂದು ಕರೆದುಕೊಂಡಿದ್ದಾರೆ. ಮೋದಿ ಅವರೊಂದಿಗೆ ನನಗೆ ಹಲವು ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಆದರೆ ಪ್ರಧಾನಿ ಈ ನೆಲದ ವ್ಯಕ್ತಿ ಎಂದು ಹೇಳಿದ್ದಾರೆ.
ಕೊರೋನಾ ಲಾಕ್​​ಡೌನ್ ಹಾಗೂ ಅರ್ಟಿಕಲ್​ 370ರ ರದ್ದು ಮಾಡಿದ ಕಾರಣ ಜಮ್ಮು ಕಾಶ್ಮೀರದ ಆರ್ಥಿಕ ಪರಿಸ್ಥಿತಿಯನ್ನು ಪರಿಪಡಿಸಬೇಕಿದೆ. ಈ ಹಿಂದಿಗಿಂತಲೂ ಅಭಿವೃದ್ಧಿ ಕಾರ್ಯಗಳು ಮೂರ ಪಟ್ಟು ಹೆಚ್ಚಾಗಬೇಕಿದೆ. ರಾಷ್ಟ್ರ ರಾಜಧಾನಿ ದೆಹಲಿಗಿಂತ 3 ರಿಂದ 4 ರಷ್ಟು ಹೆಚ್ಚಿನ ಅನುದಾನವನ್ನು ಜಮ್ಮು ಕಾಶ್ಮೀರಕ್ಕೆ ನೀಡಬೇಕಿದೆಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!