ವಯಸ್ಸಾಗಿದ್ದು ನಂಗೆ ಮಾತ್ರ, ಮೋದಿಯವರಿಗಲ್ಲ- ಸಂಗೀತಗಾರ ರಿಕ್ಕಿ ಕೇಜ್ ವಿಸ್ಮಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡಿವೈನ್ ಟೈಡ್ಸ್’ ಆಲ್ಬಂಗೆ ಎರಡನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸಂಗೀತ ಸಂಯೋಜಕ ರಿಕ್ಕಿ ಕೇಜ್‌ ಪ್ರಧಾನಿ ಮೋದಿಯವರ ಬಗ್ಗೆ ವಿಸ್ಮಯದ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ತಮ್ಮ ಟಿಟ್ಟರ್‌ ಖಾತೆಯಲ್ಲಿ ಮೋದಿಯವರೊಂದಿಗಿನ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ 2015ರಲ್ಲಿ ತೆಗೆದ ಫೋಟೊ ಹಾಗೂ 2022ರಲ್ಲಿ ತೆಗೆದ ಫೋಟೋ ಸೇರಿಸಿ, ಇದು ಏಳು ವರ್ಷಗಳಲ್ಲಿ ನಡೆದ ಬದಲಾವಣೆ. ವಯಸ್ಸಾಗಿದ್ದು ನಂಗೆ ಮಾತ್ರ, ಮೋದಿಯವರಿಗಲ್ಲ. ಏಳು ವರ್ಷಗಳ ಹಿಂದೆ ನೀವು ಹೇಗಿದ್ದೀರೋ ಹಾಗೆ ಕಾಣುತ್ತಿದ್ದೀರ…ಆದರೆ ನನಗೇ ವಯಸ್ಸಾಗಿದೆ ಎಂದು ಮಂದಹಾಸ ಬೀರಿದ್ದಾರೆ. ಸರ್‌ ಈ ನಿಮ್ಮ ಅಂದದ ಹಿಂದಿರುವ ಗುಟ್ಟೇನು ಎಂದು ಆತ್ಮೀಯವಾಗಿ ಕೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!