ಮಾ.19-20 ಭಾರತಕ್ಕೆ ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿದಾ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾ.19-20ರಂದು ಭಾರತಕ್ಕೆ ಜಪಾನ್‌ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿದಾ ಭೇಟಿ ನೀಡಲಿದ್ದಾರೆ.
ಭಾರತ ಹಾಗೂ ಜಪಾನ್‌ ನ ವಾರ್ಷಿಕ ಶೃಂಗ ಸಭೆಗಾಗಿ ಹಾಗೂ ಉಭಯ ರಾಷ್ಟ್ರಗಳ ನಡುವಿನ ಹೊಸ ಹೂಡಿಕೆ ವಿಚಾರವಾಗಿ ಇಬ್ಬರು ನಾಯಕರು ಚರ್ಚೆ ನಡೆಸಲಿದ್ದಾರೆ.
ಈ ಶೃಂಗ ಸಭೆ ದ್ವಿಪಕ್ಷೀಯ ಸಹಭಾಗಿತ್ವ ಬಲ ಪಡಿಸಲು ಹಾಗೂ ಎರಡೂ ರಾಷ್ಟ್ರಗಳ ನಡುವಿನ ಆರ್ಥಿಕ ಸಹಕಾರವನ್ನು ಹೆಚ್ಚಿಸಲಿದೆ.
2019ಋಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಲ್ಲಿ ನಡೆಯುತಿದ್ದ ಪ್ರತಿಭಟನೆ ಹಾಗು ನಂತರದಲ್ಲಿ ಕೋವಿಡ್‌ ಕಾರಣದಿಂದ ಅಂದಿನ ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರ ಭಾರತ ಪ್ರವಾಸ ರದ್ದಾಗಿತ್ತು. ಇದೀಗ ಕಿಶಿದಾ ಅವರು ಜಪಾನ್‌ ನ ಪ್ರಧಾನಿಯಾಗಿದ್ದು, ಈಗ ಉಭಯ ದೇಶಗಳ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಭಾರತಕ್ಕೆ ಆಗಮಿಸಲಿದ್ದಾರೆ.
ಜಪಾನ್‌ ಪ್ರಧಾನಿಯ ಭೇಟಿಯಂದು ದೆಹಲಿಯಲ್ಲಿ ಸಮಾರಂಭವೊಂದನ್ನುದ್ದೇಶಿನಿ ಮಾತನಾಡಲಿದ್ದು, ಮುಂಬೈ-ಅಹ್ಮದಾಬಾದ್​ ಕಾರಿಡಾರ್​ ಆಚೆಗೂ ಬುಲೆಟ್​​ ರೈಲು ಯೋಜನೆ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ.
ಇತ್ತೀಚೆಗಷ್ಟೆ ಕ್ವಾಡ್‌ (ಭಾರತ, ಆಸ್ಟ್ರೇಲಿಯಾ, ಜಪಾನ್‌, ಅಮೆರಿಕ) ನಾಯಕರು ವರ್ಚುವಲ್‌ ಸಭೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!