ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮೋದಿ ʼಮನ್‌ ಕಿ ಬಾತ್‌ʼ

ಹೊಸದಿಗಂತ ವರದಿ ಕಲಬುರಗಿ:
ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜನೆ ಮಾಡಲಾಗಿರುವ ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೆಚ್ಚಿನ ಮನ್ ಕೀ ಬಾತ್ ಆಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದ ರದ್ದೇವಾಡಗಿ ಲೇಔಟ್, ನ ಕೆಸರಟಗಿ ಹತ್ತಿರ 100 ಎಕರೆಯ ಜಾಗದಲ್ಲಿ ಬೃಹತ್ ವಿರಾಟ್ ಸಮಾವೇಶ ನಡೆಯುತ್ತಿದ್ದು,ವೇದಿಕೆಯಲ್ಲಿ ಮನ್ ಕೀ ಬಾತ್ ವಿಶೇಷ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವ ಕೋಟ್ ಶ್ರೀನಿವಾಸ ಪೂಜಾರಿ, ಭೈರತಿ ಬಸವರಾಜ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ,ಮಾಲೀಕಯ್ಯ ಗುತ್ತೇದಾರ, ಶಾಸಕಿ ರೂಪಾಲಿ ನಾಯಕ್,ಎನ್.ರವಿಕುಮಾರ್ ಸೇರಿದಂತೆ ಹಲವು ಶಾಸಕರು ಹಾಗೂ ಜನಪ್ರತಿನಿಧಿಗಳು ಮನ್ ಕೀ ಬಾತ್ ಆಲಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!