ನಾಟು-ನಾಟು ಧಾಟಿಯಲ್ಲಿ ಬಿಜೆಪಿ ಯುವಮೋರ್ಚದ ಮೋದಿ-ಮೋದಿ ಹಾಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ನಾಟು ನಾಟು ಗೀತೆಗೆ ಆಸ್ಕರ್ ಒಲಿದು ಬಂದಾಗ ಪ್ರಧಾನಿ ಮೋದಿ ಮನತುಂಬಿ ಶುಭಕೋರಿದ್ದರು.

ಇದೀಗ ನಾಟು ನಾಟು ಧಾಟಿಯಲ್ಲೇ ‘ಮೋದಿ-ಮೋದಿ’ ಎನ್ನುವ ಹಾಡು ಎಲ್ಲೆಡೆ ವೈರಲ್ ಆಗುತ್ತಿದೆ. ಕರ್ನಾಟಕ ವಿಧಾನಸಭೆಯ ಚುನಾವಣೆ ಪ್ರಚಾರಕ್ಕೆ ಪೂರಕವಾಗಿ ಭಾರತೀಯ ಜನತಾ ಯುವ ಮೋರ್ಚದ ಕಾರ್ಯಕರ್ತರು ನಾಟು ನಾಟು ಹಾಡಿನ ಧಾಟಿಯಲ್ಲಿ ‘ಮೋದಿ ಮೋದಿ’ ಎನ್ನುವ ಹಾಡನ್ನು ಸಂಯೋಜಿಸಿದ್ದಾರೆ.ಇದಕ್ಕೆ ಹೆಜ್ಜೆ ಕೂಡ ಹಾಕಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

ಸಮರ್ಪಣಾ ಭಾವದ ಬಿಜೆವೈಎಮ್‌ನ ಕಾರ್ಯಕರ್ತರು ಸಂಗೀತ ಸಂಯೋಜನೆ ಮಾಡಿರುವ ಮೋದಿ-ಮೋದಿ ಹಾಡು ಅದ್ಭುತವಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರ ಅಪರಿಮಿತ ಉತ್ಸಾಹ ಹಾಗೂ ಬದ್ಧತೆಗೆ ಇದೇ ಸಾಕ್ಷಿ. ಅವರ ಕಠಿಣ ಪರಿಶ್ರಮ ಹಾಗೂ ಸಮರ್ಪಣೆಗೆ ನಾವು ಸದಾ ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.

ಅಂದ ಹಾಗೆ ಮೋದಿ-ಮೋದಿ ಹಾಡು ಹೇಗಿದೆ? ನೀವೂ ಕೇಳಿ..

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!