ಜರ್ಮನಿಯಲ್ಲಿ ಮೊಳಗಿತು ‘ಮೋದಿ ಒನ್ಸ್ ಮೋರ್’ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜರ್ಮನಿಯ ಬರ್ಲಿನ್​ನಲ್ಲಿ ನಡೆದ ಅನಿವಾಸಿ ಭಾರತೀಯರ ಕಾರ್ಯಕ್ರವೊಂದರಲ್ಲಿ ‘ಮೋದಿ ಓನ್ಸ್​ ಮೋರ್’​​ ಎಂಬ ಘೋಷಣೆ ಕೇಳಿ ಬಂದಿದೆ. ಈ ಮೂಲಕ ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಸೆಯನ್ನ ಅಲ್ಲಿನ ಭಾರತೀಯರು ವ್ಯಕ್ತಪಡಿಸಿದ್ದಾರೆ.
ಬರ್ಲಿನ್‌ನ ಪಾಟ್ಸ್‌ಡೇಮರ್ ಪ್ಲಾಟ್ಜ್‌ನಲ್ಲಿರುವ ಥಿಯೇಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡುವಾಗ ಈ ಘೋಷಣೆ ಮೊಳಗಿದೆ.

ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣದ ಸಂದರ್ಭದಲ್ಲಿ ‘ಮೋದಿ, ಮೋದಿ’, ‘ಭಾರತ್ ಮಾತಾ ಕಿ ಜೈ’, ‘ಮೋದಿ ಹೈ ತೋ ಮಮ್ಕಿನ್ ಹೈ’ ಮತ್ತು ‘2024, ಮೋದಿ ಒನ್ಸ್ ಮೋರ್’ ಎಂಬ ಘೋಷಣೆಗಳನ್ನು ಕೂಗಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!