Monday, October 3, 2022

Latest Posts

ಪ್ರಧಾನಿ ಮೋದಿ ಆಹಾರ ವೆಚ್ಚ ನೋಡ್ಕೊಳ್ಳೋರು ಯಾರು? ಆರ್‌ಟಿಐ ನೀಡಿದೆ ಇದಕ್ಕೆ ಶಾಕಿಂಗ್ ಉತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರ ಆಹಾರ ವೆಚ್ಚವನ್ನು ಖುದ್ದು ಅವರೇ ಭರಿಸುತ್ತಿದ್ದಾರೆ! ಎಸ್, ಈ ಮಾಹಿತಿಯನ್ನು ಸರ್ಕಾರ ನೀಡಿದೆ. ನರೇಂದ್ರ ಮೋದಿಯವರ ಆಹಾರ ವೆಚ್ಚದ ಕುರಿತಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ.

ಪ್ರಧಾನಿಯವರ ಆಹಾರಕ್ಕೆ ಸರ್ಕಾರದ ಹಣವನ್ನು ಬಳಸುತ್ತಿಲ್ಲ ಎಂಬ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲಾಗಿದೆ. ಅಲ್ಲದೆ ನರೇಂದ್ರ ಮೋದಿಯವರೇ ಈ ವೆಚ್ಚವನ್ನು ಭರಿಸುತ್ತಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಕಾರ್ಯದರ್ಶಿ ವಿನೋದ್ ಬಿಹಾರಿ ಸಿಂಗ್ ಅವರು ಈ ಉತ್ತರ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!